ವಾಷಿಂಗ್ಟನ್, ಡಿ.21 (DaijiworldNews/PY): ಡೊನಾಲ್ಡ್ ಟ್ರಂಪ್ ಅವರು ಅಮೇರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ವಿರುದ್ದ ಹೋರಾಟವನ್ನು ಮುಂದುವರೆಸಿದ್ದು, ಪೆನ್ಸೆಲ್ವೇನಿಯಾ ಕ್ಷೇತ್ರದ ಫಲಿತಾಂಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಟ್ರಂಪ್ ಮಾಡಿರುವ ಆರೋಪ ಆಧಾರರಹಿತವಾಗಿದೆ ಎಂದು ನ್ಯಾಯಾಲಯ ಹೇಳಿದ್ದರೂ ಕೂಡಾ ಟ್ರಂಪ್ ತಮ್ಮ ಹೋರಾಟವನ್ನು ಮುಂದುವರೆಸಿದ್ದು, ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಟ್ರಂಪ್ ಸಲ್ಲಿಸಿರುವ ಹೊಸ ಅರ್ಜಿಯಲ್ಲಿ, ಸುಪ್ರೀಂ ಕೋರ್ಟ್ನಲ್ಲಿ ಅಂಚೆ ಮತಪತ್ರಗಳ ಎಣಿಕೆಗೆ ಸಂಬಂಧಪಟ್ಟಂತೆ ಇರುವ ಪೆನ್ಸೆಲ್ವೇನಿಯಾದ ಮೂರು ಪ್ರಕರಣಗಳನ್ನು ಬಿಟ್ಟು ಬಿಡುವುದು. ಅಲಲದೇ, ಮತ ಚಲಾಯಿಸಿರುವ ಮತದಾರರನ್ನು ಬಿಟ್ಟು, ತನ್ನದೇ ಆದ ಮತದಾರರನ್ನು ಪೆನ್ಸೆಲ್ವೇನಿಯ ಕ್ಷೇತ್ರದ ಚುನಾವಣೆಗೆ ಆಯ್ಕೆ ಮಾಡುವಂತೆ ಮನವಿ ಮಾಡಿದ್ದಾರೆ.
ಈ ವಿಚಾರವಾಗಿ ತಿಳಿಸಿದ ಟ್ರಂಪ್ ಪರ ವಕೀಲ ರೂಡಿ ಗಿಯುಲಿಯಾನಿ, ಸೂಕ್ತವಾದ ಪರಿಹಾರಗಳನ್ನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ ಎಂದಿದ್ದಾರೆ.