ವಾಷಿಂಗ್ಟನ್, ಡಿ.22 (DaijiworldNews/MB) : ಹ್ಯೂಸ್ಟನ್ನಲ್ಲಿ ಕಳೆದ ವರ್ಷ ಕರ್ತವ್ಯದಲ್ಲಿ ಸಂದರ್ಭ ಹತ್ಯೆಯಾದ ಸಿಖ್ ಪೊಲೀಸ್ ಅಧಿಕಾರಿ ಸಂದೀಪ್ ಸಿಂಗ್ ಧಲಿವಾಲ್ ಅವರ ಹೆಸರನ್ನು ಟೆಕ್ಸಾಸ್ ಅಂಚೆ ಕಚೇರಿಗೆ ನಾಮಕರಣ ಮಾಡುವ ಆದೇಶಕ್ಕೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಸಹಿ ಹಾಕಿದ್ದಾರೆ.
ಸೋಮವಾರ ಟ್ರಂಪ್, ಟೆಕ್ಸಾಸ್ನ ಹ್ಯೂಸ್ಟನ್ನಲ್ಲಿರುವ 315 ಅಡ್ಡಿಕ್ಸ್ ಹೋವೆಲ್ ರಸ್ತೆಯ ಅಂಚೆ ಕಚೇರಿಗೆ "ಡೆಪ್ಯುಟಿ ಸಂದೀಪ್ ಸಿಂಗ್ ಧಲಿವಾಲ್ ಅಂಚೆ ಕಚೇರಿ ಕಟ್ಟಡ" ಎಂದು ಹೆಸರಿಡುವ ಆದೇಶಕ್ಕೆ ಸಹಿ ಹಾಕಿದ್ದು ಈ ಮೂಲಕ ಅಮೇರಿಕಾದಲ್ಲಿ ಅಂಚೆ ಕಚೇರಿಯೊಂದಕ್ಕೆ ಭಾರತೀಯ–ಅಮೇರಿಕನ್ ಹೆಸರಿಟ್ಟಿರುವ ಎರಡನೇ ಪ್ರಕರಣವಾಗಿ ಇದು ಹೊರಹೊಮ್ಮಿದೆ.
ಈ ಹಿಂದೆ 2006ರಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಅಂಚೆ ಕಚೇರಿಯೊಂದಕ್ಕೆ ಭಾರತೀಯ–ಅಮೇರಿಕನ್ ಸಂಸದ ದಲೀಪ್ ಸಿಂಗ್ ಸೌಂದ್ ಅವರ ಹೆಸರಿಡಲಾಗಿತ್ತು.
ಭಾರತದಲ್ಲಿ ಜನಿಸಿದ್ದ ಸಂದೀಪ್ ಸಿಂಗ್ ಧಲಿವಾಲ್, ತಮ್ಮ ಪೋಷಕರೊಂದಿಗೆ ಹ್ಯೂಸ್ಟನ್ನಲ್ಲಿ ನೆಲೆಸಿದ್ದರು. ಅವರು ೨೦೧೯ರ ಸೆಪ್ಟೆಂಬರ್ 27ರಂದು ಹೂಸ್ಟನ್ನಲ್ಲಿ ಸಂಚಾರ ನಿಲುಗಡೆ ಸ್ಥಳದಲ್ಲಿ ಕರ್ತವ್ಯದಲ್ಲಿ ಇದ್ದ ಸಂದರ್ಭ ಅವರಿಗೆ ಗುಂಡಿ ಹಾರಿಸಿ ಹತ್ಯೆ ಮಾಡಲಾಗಿತ್ತು.