ವಾಷಿಂಗ್ಟನ್, ಡಿ.23 (DaijiworldNews/PY): ದೇಶದ ಆರ್ಥಿಕತೆಯು ಕೊರೊನಾ ಕಾರಣದಿಂದ ಕುಸಿತ ಕಂಡಿರುವ ಪರಿಣಾಮ ಪ್ರತಿಯೋರ್ವ ಪ್ರಜೆಗೆ 44,306 ರೂ.ಪರಿಹಾರ ಮೊತ್ತವನ್ನು ನೀಡಲು ಅನುವು ಮಾಡಿಕೊಡುವ ಮಸೂದೆಗೆ ಅಂಕಿತ ಹಾಕಲು ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ವಿಡಿಯೋ ಸಂದೇಶವನ್ನು ಹಂಚಿಕೊಂಡಿರುವ ಅವರು, "ನೆರವಿನ ರೂಪದಲ್ಲಿ ವಿದೇಶಗಳಿಗೆ ಭಾರಿ ಮೊತ್ತದ ಹಣವನ್ನು ನೀಡಲಾಗುತ್ತದೆ. ಆದರೆ, ಅಮೇರಿಕಾದ ಪ್ರಜೆಗಳಿಗೆ ಮಾತ್ರ ಕಡಿಮೆ ಪ್ರಮಾಣದಲ್ಲಿ ಪರಿಹಾರದ ಮೊತ್ತವನ್ನು ಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ಮಸೂದೆಗೆ ತಕ್ಷಣವೇ ತಿದ್ದುಪಡಿತಂದು ಪರಿಹಾರದ ಮೊತ್ತವನ್ನು 1,47,688 ರೂ.ಗೆ ಹೆಚ್ಚಿಸುವಂತೆ ಸಂಸದರಿಗೆ ಸೂಚನೆ ನೀಡುತ್ತೇನೆ" ಎಂದಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಈ ಪ್ರಸ್ತಾವಕ್ಕೆ ಸಂಸತ್ನ ಕೆಳಮನೆ ಸ್ಪೀಕರ್ ನ್ಯಾನ್ಸಿ ಪೆಲೋಸಿ ಸೇರಿದಂತೆ ಬಹುತೇಕ ಸಂಸದರು ಬೆಂಬಲ ಸೂಚಿಸಿದ್ದಾರೆ.