ಬೀಜಿಂಗ್, ಡಿ.24 (DaijiworldNews/PY): "ಕೊರೊನಾ ವೈರಸ್ನ ಹೊಸ ಸ್ವರೂಪವು ವೇಗವಾಗಿ ಹರಡುತ್ತಿರುವ ಕಾರಣದಿಂದ ಬ್ರಿಟನ್ ಹಾಗೂ ಅಲ್ಲಿಂದ ಬರುವ ವಿಮಾನಗಳಿಗೆ ಅನಿರ್ದಿಷ್ಟಾವಧಿಗೆ ನಿರ್ಬಂಧ ಹೇರುವುದಾಗಿ" ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುರುವಾರ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸುದೀರ್ಘವಾದ ಚರ್ಚೆಯ ನಂತರ ಬ್ರಿಟನ್ ವಿಮಾನಗಳನ್ನು ಸ್ಥಗಿತಗೊಳಿಸಲು ಹೇರುವ ವಿಚಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ.
"ಚೀನಾವು ಇತ್ತೀಚಿನ ಬೆಳವಣಿಗೆಯ ವಿಚಾರವಾಗಿ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಪರಿಸ್ಥಿತಿಗೆ ತಕ್ಕಂತೆ ನಿಯಂತ್ರಣಕ್ಕಾಗಿ ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ" ಎಂದಿದ್ದಾರೆ.
ಕೊರೊನಾ ವೈರಸ್ನ ಹೊಸ ಸ್ವರೂಪವು ವೇಗವಾಗಿ ಹರಡುತ್ತಿರುವ ಕಾರಣ ಜಗತ್ತಿನಾದ್ಯಂತ ದೇಶಗಳು ಗಡಿಗಳನ್ನು ಬಂದ್ ಮಾಡಲಾರಂಭಿಸಿವೆ. ಅಲ್ಲದೇ, ವಿಮಾನ ಹಾರಾಟದ ಮೇಲೆಯೂ ಕೂಡಾ ನಿರ್ಬಂಧ ಹೇರಲಾಗಿದೆ.
ಈಗಾಗಲೇ ಯುರೋಪ್ನ ಎಲ್ಲಾ ರಾಷ್ಟ್ರಗಳು ಬ್ರಿಟನ್ಗೆ ವಿಮಾನ ಸಂಚಾರವನ್ನು ನಿರ್ಬಂಧಿಸಿವೆ. ಡಿ.31ರ ತನಕ ಭಾರತವೂ ಕೂಡಾ ಬ್ರಿಟನ್ಗೆ ತೆರಳುವ ಹಾಗೂ ಅಲ್ಲಿಂದ ಬರುವ ವಿಮಾನಗಳ ಸಂಚಾರವನ್ನು ನಿಷೇಧಿಸಿದೆ.