ಕೊಲಂಬಸ್, ಡಿ.25 (DaijiworldNews/PY): ಓಹಿಯೋದ ಕೊಲಂಬಸ್ನಲ್ಲ ಪೊಲೀಸ್ ಅಧಿಕಾರಿಯೋರ್ವರು ಕಪ್ಪು ಜನಾಂಗದ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಆಂಡ್ರೆ ಮಾರಿಸ್ ಹಿಲ್(47) ಪೊಲೀಸ್ ಗುಂಡೇಟಿಗೆ ಬಲಿಯಾದವರು.
ಇದು ಅಮೇರಿಕಾದ ಡಿಸೆಂಬರ್ ತಿಂಗಳಿನಲ್ಲಿ ನಡೆದ ಎರಡನೇಯ ಹತ್ಯೆ ಪ್ರಕರಣವಾಗಿದ್ದು, ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿ ಗುರುವಾರದಿಂದ ಪ್ರತಿಭಟನೆ ಪ್ರಾರಂಭವಾಗಿದೆ.
ಆಂಡ್ರೆ ಮಾರಿಸ್ ಹಿಲ್ ತನ್ನ ಎಡಗೈಯಲ್ಲಿ ಪ್ರಕಾಶಮಾನವಾದ ಸೆಲ್ ಫೋನ್ ಅನ್ನು ಹಿಡಿದುಕೊಂಡಿ ಪೊಲೀಸರ ಬಳಿಗೆ ನಡೆದುಕೊಂಡು ಹೋಗುವ ದೃಶ್ಯವನ್ನು ಬಿಡುಗಡೆ ಮಾಡಲಾಗಿದ್ದು, ಆದರೆ, ಹಿಲ್ನ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಪೊಲೀಸ್ ಗುಂಡೇಟಿಗೆ ಹಿಲ್ ಬಲಿಯಾಗಿರುವ ಕಾರಣ ಕಪ್ಪು ಜನಾಂಗದಿಂದ ಪ್ರತಿಭಟನೆ ಆರಂಭವಾಗಿದೆ.
ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದು, ಪೊಲೀಸ್ ಅಧಿಕಾರಿಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.