ಮ್ಯಾಡಿಸನ್, ಡಿ.25 (DaijiworldNews/PY): ಡೊನಾಲ್ಡ್ ಟ್ರಂಪ್ ಅವರು ವಿಸ್ಕನ್ಸಿನ್ ರಾಜ್ಯದಿಂದ ಗೆದ್ದಿರುವುದಾಗಿ ಘೋಷಣೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಈಸ್ಟರ್ನ್ ವಿಸ್ಕನ್ಸಿನ್ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದ್ದು, ಈ ತೀರ್ಪನ್ನು ಅಮೇರಿಕಾದ 7ನೇ ಸರ್ಕಿಟ್ ಕೋರ್ಟ್ ಆಫ್ ಅಪೀಲ್ಸ್ ಎತ್ತಿ ಹಿಡಿದಿದೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬಿಡೆನ್ ಅವರು ನ.3ರಂದು ನಡೆದಿದ್ದ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು 0.6 ಅಂಕಗಳಿಂದ ಪರಾಭವಗೊಳಿಸಿದ್ದರು.
ಈ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಿ ಡೊನಾಲ್ಡ್ ಟ್ರಂಪ್ ಅವರು ಡಿ.2ರಂದು ಈಸ್ಟರ್ನ್ ವಿಸ್ಕನ್ಸಿನ್ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಆದರೆ, ನ್ಯಾ.ಬ್ರೆಟ್ ಲುಡ್ವಿಗ್ ಅವರು, ಟ್ರಂಪ್ ಅವರ ವಾದದಲ್ಲಿ ಯಾವುದೇ ರೀತಿಯಾದ ಹುರುಳಿಲ್ಲ. ಕಾನೂನಿನಲ್ಲಿ ಅವರ ವಾದಕ್ಕೆ ಮಾನ್ಯತೆ ಇಲ್ಲ ಎಂದು ತೀರ್ಪು ನೀಡಿದ್ದು, ಈ ತೀರ್ಪನ್ನು ಪ್ರಶ್ನಿಸಿ ಡೊನಾಲ್ಡ್ ಟ್ರಂಪ್ ಅಬರು ಮೇನ್ಮನವಿ ಸಲ್ಲಿಸಿದ್ದರು.
ಅಮೇರಿಕಾದ 7ನೇ ಸರ್ಕಿಟ್ ಕೋರ್ಟ್ ಆಫ್ ಅಪೀಲ್ಸ್ನ ಮೂವರು ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಿದ್ದು, ಈ ತೀರ್ಪನ್ನು ಎತ್ತಿಹಿಡಿದಿದೆ.