ನವದೆಹಲಿ, ಡಿ.26 (DaijiworldNews/PY): ಚೀನಾವು ಪಾಕಿಸ್ತಾನಕ್ಕೆ 50 ವಿಂಗ್ ಲೂಂಗ್ II ಶಸ್ತ್ರಸಜ್ಜಿತ ಡ್ರೋನ್ಗಳನ್ನು ಪೂರೈಕೆ ಮಾಡಲಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಇತ್ತೀಚೆಗೆ ವರದಿ ಮಾಡಿದ್ದು, ಈ ಡ್ರೋನ್ಗಳು ಎತ್ತರದ ಪ್ರದೇಶದಲ್ಲಿ ನಿಯೋಜನೆಯಾಗಿರುವ ಭಾರತೀಯ ಮಿಲಿಟರಿಗೆ ದುಸ್ವಪ್ನವಾಗಲಿದೆ ಎಂದಿದೆ.
"ಶಸ್ತ್ರಸಜ್ಜಿತ ಚೀನಾ ಹಾಗೂ ಟರ್ಕಿಶ್ ಡ್ರೋನ್ಗಳು ಲಿಬಿಯಾ, ಸಿರಿಯಾ ಹಾಗೂ ಅಜರ್ಬೈಜನ್ ಸಂಘರ್ಷಗಳ ಸಂದರ್ಭ ನಿರ್ಣಾಯಕವಾದ ಪಾತ್ರ ವಹಿಸಿತ್ತು ಎಂದು ಚೀನಾದ ಮಾಧ್ಯಮಗಳು ವಾದಿಸಿದ್ದು, ಭಾರತಕ್ಕೆ ಹೆಚ್ಚಿನ ಸಂಖ್ಯೆಯ ಸಶಸ್ತ್ರ ಡ್ರೋನ್ಗಳ ದಾಳಿಯನ್ನು ಎದುರಿಸಲು ಸಾಧ್ಯವಿಲ್ಲ" ಎಂದು ಹೇಳಿದೆ.
"ಒಂದು ವೇಳೆ ಶಸ್ತ್ರಸಜ್ಜಿತ ಡ್ರೋನ್ಗಳು ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಅಥವಾ ಲಡಾಖ್ನ ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿ ಬಂದಲ್ಲಿ ಗುಂಡು ಹಾರಿಸಿ ಹೊಡೆದುರುಳಿಸಲಾಗುತ್ತದೆ" ಎಂದು ವಾಯು ಸೇನೆಯ ಮಾಜಿ ಮುಖ್ಯಸ್ಥರು ಹೇಳಿದರು.
"ಪಾಕಿಸ್ತಾನ ಇಂತಹ ಸಶಸ್ತ್ರ ಡ್ರೋನ್ ಹೊಂದಿದ್ದು, ಭಾರತ ಕೂಡಾ ಈ ರೀತಿಯಾದ ಡ್ರೋನ್ ಹೊಂದುವುದು ಅವಶ್ಯಕ" ಎಂದು ರಕ್ಷಣಾ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.