ಜಿನೀವಾ, ಡಿ.27 (DaijiworldNews/PY): "ಮುಂದಿನ ಸಾಂಕ್ರಾಮಿಕಕ್ಕೆ ಸಜ್ಜಾಗದೇ, ಪ್ರಸ್ತುತ ಕಾಡುತ್ತಿರುವ ಸಾಂಕ್ರಾಮಿಕಕ್ಕೆ ಹಣ ಸುರಿಯುವುದು ಅಪಾಯಕಾರಿ ಹಾಗೂ ದೂರದೃಷ್ಠಿ ಇಲ್ಲದ ತೀರ್ಮಾನವಾಗಿದೆ. ಕೊರೊನಾ ಸಂಕಷ್ಟ ಕೊನೆಯ ಸಾಂಕ್ರಾಮಿಕವೇನಲ್ಲ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧಾನೊಮ್ ಘೇಬ್ರಿಯಾಸಿಸ್ ಹೇಳಿದ್ದಾರೆ.
ಅಂತರಾಷ್ಟ್ರೀಯ ಸಾಂಕ್ರಾಮಿಕ ಸನ್ನದ್ಧತೆಯ ದಿನದ ಅಂಗವಾಗಿ ನೀಡಿದ ವಿಡಿಯೋ ಸಂದೇಶದಲ್ಲಿ ಮಾತನಾಡಿದ ಅವರು, "ನಾವು ಸಾಂಕ್ರಾಮಿಕಕ್ಕೆ ಹಣ ಸುರಿಯುತ್ತಿದ್ದೇವೆ. ಅದು ಮುಗಿನ ನಂತರ ಆ ವಿಚಾರವನ್ನು ನಾವು ಮರೆತು ಬಿಡುತ್ತೇವೆ. ಮುಂದಿನ ಸಾಂಕ್ರಾಮಿಕವನ್ನು ನಿಯಂತ್ರಿಸಲು ನಾವು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇದು ದೂರದೃಷ್ಠಿ ಇಲ್ಲದ ನಿರ್ಧಾರವಾಗಿದೆ" ಎಂದಿದ್ದಾರೆ.
"ಕೊರೊನಾ ಸಂಕಷ್ಟ ಕೊನೆಯ ಸಾಂಕ್ರಾಮಿಕವೇನಲ್ಲ. ಹವಾಮಾನ ಬದಲಾವಣೆ ಹಾಗೂ ಪ್ರಾಣಿಗಳ ಕಲ್ಯಾಣ ಕಲ್ಯಾಣವನ್ನು ನಿಭಾಯಿಸದೇ ಹೋದರೆ, ಮನುಷ್ಯನ ಆರೋಗ್ಯ ಸುಧಾರಿಸುವಂತ ಎಲ್ಲಾ ಪ್ರಯತ್ನಗಳು ಕೂಡಾ ವ್ಯರ್ಥವಾಗುತ್ತವೆ. ಕೊರೊನಾ ಸಾಂಕ್ರಾಮಿಕದಿಂದ ಪಾಠ ಕಲಿಯಲು ಇದು ಸರಿಯಾದ ಸಂದರ್ಭವಾಗಿದೆ" ಎಂದು ಹೇಳಿದ್ದಾರೆ.