ಬೀಜಿಂಗ್, ಡಿ.28 (DaijiworldNews/PY): ಹೊಸ ರಿಮೋಟ್ ಸೆನ್ಸಿಂಗ್ ಉಪಗ್ರಹವನ್ನು ಚೀನಾ ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ಚೀನಾದ ಆಧಿಕೃತ ಮಾಧ್ಯಮ ವರದಿ ಮಾಡಿದೆ.
ಸಾಂದರ್ಭಿಕ ಚಿತ್ರ
ವಾಯುವ್ಯ ಚೀನಾದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ರವಿವಾರ ರಾತ್ರಿ ಹೊಸ ರಿಮೋಟ್ ಸೆನ್ಸಿಂಗ್ ಉಪಗ್ರಹವನ್ನು ಉಡಾವಣೆ ಮಾಡಿದೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಯೋಗನ್ -33 ಉಪಗ್ರಹವನ್ನು ಲಾಂಗ್ ಮಾರ್ಚ್ -4 ಸಿ ರಾಕೆಟ್ ಉಡಾವಣೆ ಮಾಡಲಾಗಿದೆ. ಈ ಉಪಗ್ರಹವು ಯೋಜಿತ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶ ಮಾಡಿದೆ. ಈ ಉಪಗ್ರಹವು ಲಾಂಗ್ ಮಾರ್ಚ್ ಕ್ಯಾರಿಯರ್ ರಾಕೆಟ್ ಸರಣಿಯ 357 ನೇ ಫ್ಲೈಟ್ ಮಿಷನ್ ಆಗಿದೆ ಎಂದು ವರದಿ ವಿವರಿಸಿದೆ.
ಚೀನಾ ಉಡಾವಣೆ ಮಾಡಿದ ಈ ಉಪಗ್ರಹದೊಂದಿಗೆ ಮೈಕ್ರೋ ಹಾಗೂ ನ್ಯಾನೋ ತಂತ್ರಜ್ಞಾನ ಪ್ರಯೋಗ ಉಪಗ್ರಹವನ್ನೂ ಕೂಡಾ ಕಕ್ಷೆಗೆ ಕಳುಹಿಸಲಾಗಿದ್ದು, ಇವೆರಡನ್ನು ವೈಜ್ಞಾನಿಕ ಪ್ರಯೋಗ, ಭೂ ಸಂಪನ್ಮೂಲಗಳ ಸಮೀಕ್ಷೆಗೆ ಹಾಗೈ ಬೆಳೆ ಇಳುವರಿ ಅಂದಾಜು, ವಿಪತ್ತು ನಿಯಂತ್ರಣ ದೃಷ್ಠಿಯಿಂದ ಉಪಯೋಗ ಮಾಡಲಾಗುತ್ತಿದೆ.