ಬ್ರೆಸಿಲಿಯಾ, ಡಿ. 28 (DaijiworldNews/MB) : ಬ್ರೆಜಿಲ್ ಅಧ್ಯಕ್ಷರ ಬಳಿಕ ಈಗ ಬ್ರೆಜಿಲ್ನ ಉಪಾಧ್ಯಕ್ಷರಿಗೂ ಕೊರೊನಾ ದೃಢವಾಗಿದೆ. ಈ ಹಿಂದೆ ಜುಲೈನಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊರಿಗೆ ಕೊರೊನಾ ದೃಢಪಟ್ಟಿತ್ತು. ಈಗ ಬ್ರೆಜಿಲ್ನ ಉಪಾಧ್ಯಕ್ಷ ಹ್ಯಾಮಿಲ್ಟನ್ ಮೌರಾವ್ರಿಗೂ ಕೊರೊನಾ ಪಾಸಿಟಿವ್ ಆಗಿದೆ.
ರವಿವಾರ ಮೌರಾವ್ ಅವರ ಕೊರೊನಾ ಸೋಂಕು ಪರೀಕ್ಷೆ ನಡೆಸಿದಾಗ ಅವರಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಪ್ರಸ್ತುತ ಅವರು ಅಧಿಕೃತ ನಿವಾಸವಾದ ಜಬೀರು ಅರಮನೆಯಲ್ಲಿ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ ಎಂದು ಮಾಧ್ಯಮಗಳು ಪತ್ರಿಕಾ ಪ್ರಕಟಣೆಯನ್ನು ವರದಿ ಮಾಡಿದೆ.
ಬ್ರೆಜಿಲ್ನ ಬಲಪಂಥೀಯ ಅಧ್ಯಕ್ಷರಿಗೆ ಕೊರೊನಾ ದೃಢಪಟ್ಟ ಬಳಿಕ ಅವರು ಎರಡು ವಾರಗಳ ಕಾಲ ಕ್ವಾರಂಟೈನ್ಗೆ ಒಳಗಾಗಿದ್ದರು. ಆದರೆ ಬಳಿಕ ಮಾಸ್ಕ್ ಧರಿಸದೆಯೇ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಹಿನ್ನೆಲೆ ಬ್ರೆಜಿಲ್ ಅನೇಕ ಹಿರಿಯ ಅಧಿಕಾರಿಗಳಿಗೆ ಕೊರೊನಾ ಸೋಂಕು ಹರಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಕೊರೊನಾ ಸೋಂಕು ಪ್ರಕರಣಗಳ ಆಧಾರದಲ್ಲಿ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೇರಿಕಾ ಅತೀ ಹೆಚ್ಚು ಪ್ರಕರಣಗಳ ಮೂಲಕ ಮೊದಲ ಸ್ಥಾನದಲ್ಲಿದೆ. ಅಮೇರಿಕಾದಲ್ಲಿ ಒಟ್ಟು 1,95,73,847 ಪ್ರಕರಣಗಳು ದೃಢಪಟ್ಟಿದ್ದು 341,138 ಮಂದಿ ಸಾವನ್ನಪ್ಪಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಭಾರತವಿದ್ದು 1,02,08,725 ಕೊರೊನಾ ಪ್ರಕರಣಗಳು ದಾಖಲಾಗಿದೆ. ಈ ಪೈಕಿ 1,47,940 ಮಂದಿ ಸಾವನ್ನಪ್ಪಿದ್ದಾರೆ. ಬ್ರೆಜಿಲ್ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದ್ದು 7,484,285 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 191,146 ಮಂದಿ ಮೃತಪಟ್ಟಿದ್ದಾರೆ.