ಶಾಂಘೈ, ಡಿ. 28 (DaijiworldNews/MB) : ವುಹಾನ್ ನಗರದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಹರಡುವ ಬಗ್ಗೆ ಲೈವ್ ವರದಿ ಮಾಡಿದ್ದ ನಾಗರಿಕ ಪತ್ರಕರ್ತೆಯೊಬ್ಬರಿಗೆ ಶಾಂಘೈ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಾಜಿ ವಕೀಲೆ ಝಾಂಗ್ ಝಾನ್, ಜೈಲು ಶಿಕ್ಷೆಗೆ ಗುರಿಯಾದ ಪತ್ರಕರ್ತೆ.
ವುಹಾನ್ ನಗರದಲ್ಲಿ ಕೊರೊನಾ ಹರಡುವ ಬಗ್ಗೆ ಝಾಂಗ್ ಮಾಡುತ್ತಿದ್ದ ಲೈವ್ ವರದಿಗಳು, ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹಂಚಿಕೆಯಾಗುತ್ತಿದ್ದವು.
ಸಂಘರ್ಷವನ್ನು ಪ್ರೋತ್ಸಾಹಿಸಿ ಮತ್ತು ತೊಂದರೆ ಉಂಟುಮಾಡಿದ ಆರೋಪದಲ್ಲಿ ಶಾಂಘೈ ನ್ಯಾಯಾಲಯವು ಝಾಂಗ್ಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈವರೆಗೆ ಸರ್ಕಾರ, ಎಂಟು ಮಂದಿಗೆ ಶಿಕ್ಷೆ ವಿಧಿಸಿದೆ.