ವಾಷಿಂಗ್ಟನ್, ಡಿ.28 (DaijiworldNews/PY): ಮಹಾತ್ಮ ಗಾಂಧಿ ಹಾಗೂ ಮಾರ್ಟಿನ ಲೂಥರ್ ಕಿಂಗ್ ಜೂನಿಯರ್ ಅವರ ತತ್ವಚಿಂತನೆ ವಿನಿಮಯಕ್ಕೆ ಸಂಬಂಧಪಟ್ಟ ಕಾನೂನಿಗೆ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿದ್ದಾರೆ.
ಈ ಕಾನೂನು ಗಾಂಧಿ ಹಾಗೂ ಕಿಂಗ್ ಅವರ ಸಾಧನೆ, ಕಾರ್ಯಗಳ ವಿಚಾರದ ಬಗ್ಗೆ ಅಧ್ಯಯನ ನಡೆಸಲು ಭಾರತ-ಅಮೇರಿಕಾದ ನಡುವೆ ಶೈಕ್ಷಣಿಕವಾಗಿ ವೇದಿಕೆ ಸ್ಥಾಪಿಸಲು ಸಹಾಯವಾಗಲಿದೆ.
ಸುಮಾರು 20ಲಕ್ಷ ಡಾಲರ್ ಮಹಾತ್ಮ ಗಾಂಧಿ ಹಾಗು ಮಾರ್ಟಿನ ಲೂಥರ್ ಕಿಂಗ್ ಜೂನಿಯರ್ ಗ್ಲೋಬಲ್ ಅಕಾಡೆಮಿಗಾಗಿ ಹಾಗೂ ಭಾರತ ಹಾಗೂ ಅಮೇರಿಕಾ ಅಭಿವೃದ್ದಿ ಫೌಂಡೇಶನ್ಗೆ ಸುಮಾರು ಮೂರು ಕೋಟಿ ಡಾಲರ್ ಮೀಸಲಿರಿಸಲಾಗಿದೆ.