ವಾಷಿಂಗ್ಟನ್, ಡಿ.30 (DaijiworldNews/HR): ಅಮೇರಿಕಾದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಟಿವಿ ನೇರಪ್ರಸಾರದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಆಫ್ರಿಕನ್-ಅಮೇರಿಕಾನ್ ಜನರಲ್ಲಿ ಲಸಿಕೆ ಅಭಿಯಾನದ ಬಗ್ಗೆ ನಂಬಿಕೆ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.
ವಾಂಷಿಗ್ಟಂನ್ ಡಿಸಿಯ ಆರೋಗ್ಯ ಕೇಂದ್ರದಲ್ಲಿ ಕಮಲಾ ಹ್ಯಾರಿಸ್ ತಮ್ಮ ಮೊದಲ ಎರಡು ಡೋಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಅವರು,"ಆಫ್ರಿಕನ್-ಅಮೇರಿಕನ್ ಸಮುದಾಯವು ಕೊರೊನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಸಾವು ಮತ್ತು ಅನಾರೋಗ್ಯವನ್ನು ಕಂಡಿದ್ದು, ನಿಮ್ಮ ಸಮುದಾಯದಲ್ಲಿಯೇ ನೀವು ಲಸಿಕೆ ತೆಗೆದುಕೊಳ್ಳಬಹುದು, ನಿಮಗೆ ತಿಳಿದಿರುವ ಜನರಿಂದಲೇ ನೀವು ಲಸಿಕೆಯನ್ನು ಸ್ವೀಕರಿಸಬಹುದು" ಎಂದರು.
ಇನ್ನು ಕಮಲಾ ಹ್ಯಾರಿಸ್ ಅವರು ಜನವರಿ 20ರಂದು ಅಧಿಕಾರ ಸ್ವೀಕರಿಸುವ ಮೂಲಕ ಅಮೇರಿಕಾದ ಮೊದಲ ಇಂಡೋ-ಅಮೆರಿಕನ್ ಉಪಾಧ್ಯಕ್ಷೆ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.