ಲಂಡನ್, ಜ.01 (DaijiworldNews/PY): ಬ್ರಿಟನ್, ಐರೋಪ್ಯ ಒಕ್ಕೂಟದೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದು, ಹೊಸ ವರ್ಷದ ಜೊತೆ ಹೊಸ ನಿಯಮಗಳು ಕೂಡಾ ಜಾರಿಗೆ ಬಂದಿವೆ.
ಐರೋಪ್ಯ ಒಕ್ಕೂಟದ 27 ರಾಷ್ಟ್ರಗಳು ಹಾಗೂ ಬ್ರಿಟನ್ ಮಧ್ಯೆ ಮುಕ್ತ ಸಂಚಾರಕ್ಕೆ ಕಡಿವಾಣ ಬಿದ್ದಿದ್ದು, ಈ ರಾಷ್ಟ್ರಗಳ ಮಧ್ಯೆ ಸುಮಾರು 50 ಕೋಟಿ ಮಂದಿ ಮುಕ್ತವಾಗಿ ಸಂಚರಿಸುತ್ತಿದ್ದರು.
ಬ್ರಿಟನ್ನ ಗಡಿಗಳಲ್ಲಿ ಹೊಸ ವರ್ಷದಿಂದ ಹೆಚ್ಚು ಕಟ್ಟೆಚ್ಚರವಹಿಸಲಾಗಿದ್ದು, ಬಂದರುಗಳನ್ನು ಅತೀ ಹೆಚ್ಚಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಪ್ರತಿಕ್ರಿಯೆ ನೀಡಿದ್ದು, "ಇದು ಒಂದು ಅದ್ಭುತವಾದ ಕ್ಷಣವಾಗಿದ್ದು, ನಮ್ಮ ಸ್ವಾತಂತ್ರ್ಯ ನಮ್ಮ ಕೈಯಲ್ಲಿದೆ. ಮುಕ್ತ ವ್ಯಾಪಾರ ಒಪ್ಪಂದಕ್ಕೂ ಕೂಡಾ ಆರಂಭವಾಗಲಿದೆ" ಎಂದಿದ್ದಾರೆ.
2019ರ ಜನವರಿ 31ರಂದು ಐರೋಪ್ಯ ಒಕ್ಕೂಟಕ್ಕೆ ಬ್ರಿಟನ್ ವಿದಾಯ ಹೇಳಿದ್ದು, ಇದರಿಂದ 2016ರಿಂದ ಗೊಂದಲಗಳು ನಿವಾರಣೆಯಾಗಿದ್ದವು. ಬ್ರಿಟನ್ 2020ರ ಡಿಸೆಂಬರ್ 31ರಿಂದ ಐರೋಪ್ಯ ಒಕ್ಕೂಟದಿಂದ ಸಂಪೂರ್ಣ ವಿಚ್ಛೇದನಗೊಂಡಿದ್ದು, 2021 ಜನವರಿ 1ರಿಂದ ರಾಜಕೀಯ ಹಾಗೂ ಆರ್ಥಿಕ ಸ್ವಾತಂತ್ರ್ಯ ಪಡೆದುಕೊಂಡಿದೆ.