ದುಬೈ, ಜ.03 (DaijiworldNews/PY): ಭಾರತೀಯ ಮೂಲದ ದುಬೈ ನಿವಾಸಿ ರಾಮ್ಕುಮಾರ್ ಸಾರಂಗಪಾಣಿ ಅವರು 8.2 ಚದರ ಮೀಟರ್ ವಿಸ್ತೀರ್ಣದ ದೈತ್ಯ ಗ್ರೀಟಿಂಗ್ ಕಾರ್ಡ್ ರಚನೆ ಮಾಡುವ ಮೂಲಕ 19ನೇ ಬಾರಿಗೆ ಗಿನ್ನಿಸ್ ದಾಖಲೆ ಬರೆದಿದ್ದಾರೆ.
ದುಬೈ ನಿವಾಸಿ ರಾಮ್ಕುಮಾರ್ ಸಾರಂಗಪಾಣಿ ಅವರು ಯುಎಇ ಮೂಲದ ಭಾರತೀಯ ವಲಸಿಗನಾಗಿದ್ದು, ಇವರು ಈಗಾಗಲೇ ಅನೇಕ ವಿಶ್ವ ದಾಖಲೆಗಳನ್ನು ಬರೆದಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಾರಂಗಪಾಣಿ ಅವರು ರಚಿಸಿದ ಪಾಪ್-ಅಪ್ ಗ್ರೀಟಿಂಗ್ ಕಾರ್ಡ್, ಸಾಮಾನ್ಯ ಕಾರ್ಡ್ಗಳಿಗಿಂತಲೂ 100 ಪಟ್ಟು ದೊಡ್ಡದಾಗಿದೆ. ಈ ಕಾರ್ಡ್ನೊಳಗೆ ದುಬೈ ಮೂಲದ ಕಲಾವಿದ ಅಕ್ಬರ್ ಸಾಹೇಬ್ ಅವರು ರಚಿಸಿದ ವರ್ಣಚಿತ್ರಗಳ ಸಂಗ್ರವಿದೆ.
ಸಾರಂಗಪಾಣಿ ಅವರು ರಚಿಸಿದ ಕಾರ್ಡ ನಾಲ್ಕು ಮೀಟರ್ ಉದ್ದ ಹಾಗೂ 2.05 ಮೀಟರ್ ಅಗಲವನ್ನು ಹೊಂದಿದ್ದು, ಕಾರ್ಡ್ನ ಹೊರ ಕವರ್ ಎಕ್ಸ್ಪೋ 2020 ಗೆಲುವಿನ ಬಿಡ್ಗೆ ಅರ್ಹವಾಗಿದೆ ಎಂದು ವರದಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರಂಗಪಾಣಿ ಅವರು, ಪಾಪ್-ಅಪ್ ಗ್ರೀಟಿಂಗ್ ಕಾರ್ಡ್ ರಚನೆಗಾಗಿ ನಾನು ಕಳೆದ ಆರು ತಿಂಗಳಿನಿಂದ ತಯಾರಿ ಮಾಡುತ್ತಿದ್ದೇನೆ. ದೇಶಕ್ಕೆ ಹೆಮ್ಮೆಯಾಗುವಂತೆ ದಾಖಲೆ ಮುರಿಯಲು ಸೂಕ್ತವಾದ ಸಮಯಕ್ಕಾಗಿ ನಿರೀಕ್ಷೆ ಮಾಡುತ್ತಿದೆ. ಶೇಖ್ ಮೊಹಮ್ಮದ್ ಅವರ 15ನೇ ಸಿಂಹಾಸನರೋಹಣ ದಿನಕ್ಕಿಂದ ಮತ್ತೊಂದು ಒಳ್ಳೆಯ ಸಂದರ್ಭ ಬೇರೆ ಇಲ್ಲ. ನಾನು ತಯಾರಿಸಿದ ಈ ಕಾರ್ಡ್ ಅನ್ನು ಯುಎಇನ 50ನೇ ರಾಷ್ಟ್ರೀಯ ದಿನಕ್ಕೆ ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಕಾರ್ಡ್ ಅನ್ನು ಯುಎಇ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಜನವರಿ 4ರಿಂದ 18ರ ತನಕ ದೋಹಾ ಕೇಂದ್ರದಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಪ್ರದರ್ಶಿಸಲಾಗುವುದು.