ಮೆಕ್ಸಿಕೊ, ಜ.03 (DaijiworldNews/PY): ಮೆಕ್ಸಿಕೊದ 32 ವರ್ಷ ವಯಸ್ಸಿನ ವೈದ್ಯಯೋರ್ವರು ಫೈಝರ್-ಬಯೋಎನ್ಟೆಕ್ ಅಭಿವೃದ್ದಿಪಡಿಸಿರುವ ಕೊರೊನಾ ಲಸಿಕೆ ಸ್ವೀಕರಿಸಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದು, "ಈ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ" ಎಂದು ಮೆಕ್ಸಿಕೊದ ಅಧಿಕಾರಿಗಳು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ವೈದ್ಯೆಯನ್ನು ಉತ್ತರ ರಾಜ್ಯದ ನ್ಯುಯೆವೊ ಸಾರ್ವಜನಿಕ ಆಸ್ಪತ್ರೆಯ ತೀವ್ರ ನಿಗಾ ಘಟಕ್ಕೆ ದಾಖಲಿಸಲಾಗಿದೆ. ಲಸಿಕೆ ಸ್ವೀಕರಿಸಿದ ನಂತರ ವೈದ್ಯೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅಲ್ಲದೆ, ಚರ್ಮದ ಅಲರ್ಜಿ ಕೂಡಾ ಉಂಟಾಗಿದೆ.
"ವೈದ್ಯೆಗೆ ಪದೇ ಪದೇ ಅಲರ್ಜಿಯಾಗುವ ಸಮಸ್ಯೆಯಿದೆ. ಲಸಿಕೆ ಹಾಕಿಸಿಕೊಂಡ ನಂತರ ಯಾರಿಗಾದರೂ ಉರಿಯೂತ ಕಂಡು ಬಂದಿರುವುದಕ್ಕೆ ಕ್ಲಿನಿಕಲ್ ಪರೀಕ್ಷೆಗಳಿಂದ ಯಾವುದೇ ರೀತಿಯಾದ ಪುರಾವೆಗಳಿಲ್ಲ" ಎಂದು ಸಚಿವಾಲಯ ತಿಳಿಸಿದೆ.
ಶುಕ್ರವಾರ ರಾತ್ರಿ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಆರಂಭಿಕ ರೋಗದ ನಿರ್ಣಯ ಎನ್ಸೆಫಲೋಮೈಲಿಟಿಸ್ ಎಂದು ಹೇಳಿದೆ. ಎನ್ಸೆಫಲೋಮೈಲಿಟಿಸ್ ಎಂದರೆ, ಮೆದುಳು ಹಾಗೂ ಬೆನ್ನುಹುರಿಯ ಉರಿಯೂತವಾಗಿದೆ.