ನಿಯಾಮೆ, ಜ.04 (DaijiworldNews/HR): ನೈಜೆರ್ ಸಮೀಪದ ಎರಡು ಗ್ರಾಮಗಳ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದು, ಕನಿಷ್ಠ 100 ಜನರು ಮೃತಪಟ್ಟಿದ್ದಾರೆ ಎಂದು ನೈಜೀರಿಯಾದ ಪ್ರಧಾನಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಪ್ರಧಾನಿ ಬ್ರಿಗಿ ರಫಿನಿ, "ಎರಡೂ ಗ್ರಾಮಗಳಿಗೆ ಭಾನುವಾರ ದಾಳಿ ನಡೆಸಿದ್ದು, ಮೃತರಿಗೆ ಸಂತಾಪ ಸೂಚಿಸಲು ಗ್ರಾಮಸ್ಥರಿಗೆ ನೈತಿಕ ದೈರ್ಯ ತುಂಬುವ ಉದ್ದೇಶದಿಂದ ತಾವು ಭೇಟಿ ನೀಡಿದ್ದೇನೆ" ಎಂದು ತಿಳಿದ್ದಾರೆ.
ಇನ್ನು ನೈಜೆರ್ ವಲಯದಲ್ಲಿ ಹಲವು ಬಾರಿ ಇಸ್ಲಾಮಿಕ್ ಉಗ್ರಗಾಮಿಗಳು ದಾಳಿ ನಡೆಸಿದ್ದು, ನೈಜೀರಿಯಾ ಮೂಲದ, ಇಸ್ಲಾಮಿಕ್ ಸ್ಟೇಟ್ ಸಮೂಹದ ಅಲ್–ಖೈದಾ ಜೊತೆ ಗುರುತಿಸಿಕೊಂಡಿರುವ ಬೊಕೊ ಹರಾಮ್ ಸಂಘಟನೆಯೂ ಕೂಡಾ ಇದರಲ್ಲಿ ಸೇರಿದೆ ಎಂದು ತಿಳಿದು ಬಂದಿದೆ.