ವಾಷಿಂಗ್ಟನ್, ಜ.04 (DaijiworldNews/PY): ರಕ್ಷಣಾ ಕಾರ್ಯದರ್ಶಿಗಳು ಡೊನಾಲ್ಡ್ ಟ್ರಂಪ್ ಅವರಿಗೆ ಎಚ್ಚರಿಕೆ ನೀಡಿದ್ದು, "ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮ ಕುರಿತ ತಮ್ಮ ಆರೋಪಗಳ ಸಮರ್ಥನೆಗಾಗಿ ಸೇನೆಯನ್ನು ಬಳಸಿಕೊಳ್ಳುವ ಯಾವುದೇ ಪ್ರಯತ್ನ ಬೇಡ" ಎಂದಿದ್ದಾರೆ.
ಜಂಟಿ ಹೇಳಿಕೆಯಲ್ಲಿ ಈ ವಿಚಾರವಾಗಿ ತಿಳಿಸಿದ ಮಾಜಿ ಕಾರ್ಯದರ್ಶಿಗಳು, "ಈ ರೀತಿಯಾದ ಪ್ರಯತ್ನಗಳು ದೇಶವನ್ನು ಕಾನೂನುಬಾಹಿರ, ಅಪಾಯಕಾರಿ ಹಾಗೂ ಅಸಾಂವಿಧಾನಿಕವಾದ ಸ್ಥಿತಿಗೆ ಕೊಂಡೊಯ್ಯಲಿದೆ" ಎಂದು ತಿಳಿಸಿದ್ದಾರೆ.
"ಜ.20ರಂದು ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸಬೇಕು" ಎಂದು ಡೊನಾಲ್ಡ್ ಟ್ರಂಪ್ ಅವರಿಗೆ ಮಾಜಿ ಕಾರ್ಯದರ್ಶಿಗಳು ಸಲಹೆ ನೀಡಿದ್ದಾರೆ.
"ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸುವ ಸಮಯ ಮೀರಿದ್ದು, ಇದೀಗ ಸಾಂವಿಧಾನಿಕ ಕರ್ತವ್ಯಗಳನ್ನು ನಿಭಾಯಿಸುವ ಸಮಯ ಎದುರಿದೆ" ಎಂದಿದ್ದಾರೆ.