ಕಠ್ಮಂಡು, ಜ.04 (DaijiworldNews/PY): ಅಕ್ರಮವಾಗಿ ನೇಪಾಳ ಕರೆನ್ಸಿ ಆರೋಪದಡಿ ಭಾರತದ ನಾಗರಿಕ ಸೇರಿದಂತೆ ಇಬ್ಬರನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತ ಆರೋಪಿಗಳನ್ನು ಭಾರತದ ಗೋರಖ್ ಪುರದ ನಿವಾಸಿ ಅಮಿತ್ ಕುಮಾರ್ ಗುಪ್ತಾ(30), ಕಪಿಲವಸ್ತು ಜಿಲ್ಲೆಯ ಸಂಗಮ್ ತರು (22) ಎಂದು ಗುರುತಿಸಲಾಗಿದ್ದು, ಇವರನ್ನು ಕಠ್ಮಂಡು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಪೊಲೀಸರು ಪ್ರತಿನಿತ್ಯದಂತೆ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಇಬ್ಬರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಸುಮಾರು 1.47 ಕೋಟಿ ನೇಪಾಳ ಕರೆನ್ಸಿ ಪತ್ತೆಯಾಗಿದ್ದು, ಹಣವನ್ನು ಮೂರು ಚೀಲದಲ್ಲಿ ತುಂಬಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು.
ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ನೇಪಾಳ ಪೊಲೀಸರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.