ಲಂಡನ್,ಜ.05 (DaijiworldNews/HR): ರೂಪಾಂತರ ಕೊರೊನಾ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿರುವುದರಿಂದ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಬ್ರಿಟನ್ನಲ್ಲಿ ಮತ್ತೆ ಲಾಕ್ಡೌನ್ ಘೋಷಣೆ ಮಾಡಿದ್ದಾರೆ.
ಈ ಕುರಿತು ಸರ್ಕಾರಿ ಮಾಧ್ಯಮ ದೂರದರ್ಶನದಲ್ಲಿ ಲಾಕ್ಡೌನ್ ಘೋಷಣೆ ಮಾಡಿ ಬಳಿಕ ಮಾತನಾಡಿದ ಅವರು, "ಈಗಾಗಲೇ ದೇಶದ ಒಟ್ಟು ಜನಸಂಖ್ಯೆಯ ಮುಕ್ಕಾಲುಭಾಗ ಜನರು ಕಠಿಣ ನಿರ್ಬಂಧಗಳ ಅಡಿಯಲ್ಲಿ ಬದುಕುತ್ತಿದ್ದರೂ ಸೋಂಕು ತಡೆಯಲು ಸಾಧ್ಯವಾಗುತ್ತಿಲ್ಲ, ಸೋಮವಾರ ಒಂದೇ ದಿನ 27 ಸಾವಿರ ಜನರಿಗೆ ಸೋಂಕು ತಗಲಿದ್ದು, ಕಳೆದ ಮಂಗಳವಾರದಿಂದ 80 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ" ಎಂದರು.
ಇನ್ನು "ಲಸಿಕೆಗಳ ಬಳಕೆಯ ನಡುವೆಯೂ ನಾವು ರೂಪಾಂತರ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಹೆಚ್ಚಿನ ಕೆಲಸ ಮಾಡಬೇಕಿದ್ದು, ಈಗ ದೇಶದಾದ್ಯಂತ ಲಾಕ್ಡೌನ್ ಮಾಡುತ್ತಿರುವುದು ಅನಿವಾರ್ಯವಾಗಿದೆ" ಎಂದು ಹೇಳಿದ್ದಾರೆ.