ನವದೆಹಲಿ, ಜ.06 (DaijiworldNews/PY): "ಭಾರತ-ಅಮೇರಿಕಾದ ನಡುವೆ ಎಲ್ಎಸಿಯಲ್ಲಿ ಚೀನಾದಿಂದ ಎದುರಾಗುತ್ತಿರುವ ಬೆದರಿಕೆಯನ್ನು ಎದುರಿಸಲು ನಿಕಟವಾದ ಸಮನ್ವಯ ಮುಖ್ಯ" ಎಂದು ಅಧಿಕಾರದಿಂದ ಕೆಳಗಿಳಿಯುತ್ತಿರುವ ಭಾರತದಲ್ಲಿ ಅಮೇರಿಕಾದ ರಾಯಭಾರಿ ಕೆನ್ನೆತ್ ಜಸ್ಟರ್ ಹೇಳಿದ್ದಾರೆ.
ವಿದಾಯ ಭಾಷಣದಲ್ಲಿ ಮಾತನಾಡಿದ ಅವರು, "ಭಾರತದ ಭದ್ರತೆಗೆ ಯಾವುದೇ ದೇಶ ಭಾರತೀಯರು ಹೆಚ್ಚು ಸಹಕರಿಸುತ್ತಿಲ್ಲ. ಎಲ್ಎಸಿಯಲ್ಲಿ ಚೀನಾದಿಂದ ಎದುರಾಗುತ್ತಿರುವ ಬೆದರಿಕೆಯನ್ನು ಎದುರಿಸಲು ನಿಕಟವಾದ ಸಮನ್ವಯ ಮುಖ್ಯ" ಎಂದು ತಿಳಿಸಿದ್ದಾರೆ.
"ಭಾರತದೊಂದಿಗೆ ಬೇರ್ಪಡಿಸಲಾಗದಂತ ಸಂಬಂಧವನ್ನು ನಮ್ಮ ದೇಶ ಹೊಂದಿದೆ. ಭಾರತದೊಂದಿಗೆ ಅಮೇರಿಕಾದಷ್ಟು ವಿಶ್ವದ ಯಾವುದೇ ರಾಷ್ಟ್ರವು ಭಯೋತ್ಪಾಧನೆಯ ವಿರುದ್ದವಾಗಿ ಹೋರಾಡಲು ಹಾಗೂ ರಕ್ಷಣಾ ಬಲವೃದ್ಧಿಗೆ ಸಹಕಾರ ಹೊಂದಿಲ್ಲ" ಎಂದಿದ್ದಾರೆ.
"ಅಮೇರಿಕಾ-ಭಾರತ ರಕ್ಷಣಾ ಹಾಗೂ ಭದ್ರತಾ ಸಹಕಾರ ಬಲಪಡಿಸಲು ಬದ್ದವಾಗಿವೆ. ಭಾರತ-ಅಮೇರಿಕಾ ಕಳೆದ ನಾಲ್ಕು ವರ್ಷಗಳಿಂದ ಸಹಕಾರ ವೃದ್ಧಿಸಿಕೊಂಡಿವೆ. ಅಲ್ಲದೇ, ಉಭಯ ದೇಶಗಳ ರಕ್ಷಣಾ ಕೈಗಾರಿಕಾ ಸಹಕಾರವನ್ನು ಇನ್ನಷ್ಟು ವೃದ್ಧಿಸುವ ನಿರೀಕ್ಷೆಯಿದೆ" ಎಂದರು.