ವಾಷಿಂಗ್ಟನ್, ಜ.06 (DaijiworldNews/PY): ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಚೀನಾ ಮೂಲದ ಎಂದು ಪ್ರಮುಖವಾದ ಸಾಫ್ಟ್ವೇರ್ ಅಪ್ಲಿಕೇಷನ್ಗಳ ವಹಿವಾಟುಗಳನ್ನು ನಿಷೇಧಿಸುವಂತ ಎಕ್ಸಿಕ್ಯೂಟಿವ್ ಆದೇಶಕ್ಕೆ ಸಹಿ ಹಾಕಿದ್ದಾರೆ.
48 ದಿನಗಳಲ್ಲಿ ವಹಿವಾಟು ನಿಷೇಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
"ಅಮೇರಿಕಾವು, ಚೀನಾ ಮೂಲದ ರಾಷ್ಟ್ರೀಯ ಅಪ್ಲಿಕೇಶನ್ಗಳಿಂದ ರಾಷ್ಟ್ರೀಯ ಭದ್ರತೆಗೆ ಉಂಟಾಗುವಂತ ಬೆದರಿಕೆಯನ್ನು ನಿಯಂತ್ರಿಸುವಂತ ಗುರಿಯನ್ನು ಹೊಂದಿದೆ" ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಈ ಪಟ್ಟಿಯಲ್ಲಿ, ಅಲಿಬಾಬಾ ಗ್ರೂಪ್ ಅಂಗಸಂಸ್ಥೆಯ ಯುಸಿವೆಬ್ನ ಕ್ಯಾಮ್ ಸ್ಕ್ಯಾನರ್, ಶೇರ್ಇಟ್, ಕ್ಯೂಕ್ಯೂ ವಾಲೆಟ್, ಶೇರಿಟ್, ಟೆನ್ಸೆಂಟ್ ಕ್ಯೂಕ್ಯೂ, ವಿಮೇಟ್, ವೀಚಾಟ್ ಪೇ, ಮತ್ತು ಡಬ್ಲ್ಯೂಪಿಎಸ್ ಆಫೀಸ್ ಸೇರಿವೆ.
"ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಹಾಗೂ ಕಂಪ್ಯೂಟರ್ಗಳನ್ನು ಸಂಪರ್ಕಿಸುವ ಮುಖೇನ ಬಳಕೆದಾರರಿಂದ ಚೀನಾ ಮೂಲದ ಸಾಫ್ಟ್ವೇರ್ ಅಪ್ಲಿಕೇಶನ್ಗಳು ವೈಯುಕ್ತಿಕ ಡಾಟಾಗಳನ್ನು ಸೋರಿಕೆ ಮಾಡಹಬಹುದಾಗಿದೆ" ಎಂದು ಹೇಳಿದೆ.