ವಾಷಿಂಗ್ಟನ್, ಜ.07 (DaijiworldNews/PY): ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಅಮೇರಿಕಾ ಸಂಸತ್ಗೆ ನುಗ್ಗಿ ಸಂಘರ್ಷ ನಡೆಸಿದ್ದ ವಿಚಾರದ ಬಗ್ಗೆ ವಾಗ್ದಾಳಿ ನಡೆಸಿರುವ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು, "ಟ್ರಂಪ್ ಅವರು ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಬಗ್ಗೆ ಪದೇ ಪದೇ ಸುಳ್ಳು ಹೇಳುತ್ತಾ ದೇಶದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ" ಎಂದಿದ್ದಾರೆ.
"ಇದು ಅಮೇರಿಕಾಕ್ಕೆ ಆದ ಅಗೌರವ ಹಾಗೂ ಅವಮಾನಕರವಾದ ಕ್ಷಣವಾಗಿದೆ. ಚುನಾವಣೆಯ ಫಲಿತಾಂಶದ ಬಗ್ಗೆ ಪದೇ ಪದೇ ಸುಳ್ಳು ಹೇಳಿ ರಾಷ್ಟ್ರಕ್ಕೆ ಅಪಮಾನವೆಸಗಿದ್ದಾರೆ. ಈ ಘಟನೆಯನ್ನು ಇತಿಹಾಸವು ಸರಿಯಾಗಿ ನೆನಪಿಸಿಕೊಳ್ಳಲಿದೆ" ಎಂದಿದ್ದಾರೆ.
"ತಮ್ಮ ಬೆಂಬಗಲಿಗರ ಚುನಾವಣೆಯ ವಿಚಾರವಾಗಿ ರಿಪಬ್ಲಿಕನ್ ನಾಯಕರಿಗೆ ಸತ್ಯ ಹೇಳಲು ಇಷ್ಟವಿಲ್ಲ" ಎಂದು ಹೇಳಿದ್ದಾರೆ.