ಜಿನಿವಾ, ಜ.09 (DaijiworldNews/PY): "ಶ್ರೀಮಂತ ರಾಷ್ಟ್ರಗಳು ಹಾಗೂ ಕೊರೊನಾ ಲಸಿಕಾ ತಯಾರಕರು ಕೊರೊನಾ ಲಸಿಕೆ ಖರೀದಿಗಾಗಿ ದುಂಬಾಲು ಬೀಳುವುದನ್ನು ನಿಲ್ಲಿಸಬೇಕು" ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ಬಗ್ಗೆ ತಿಳಿಸಿರುವ ವಿಶ್ವಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಅವರು, "ಶ್ರೀಮಂತ ರಾಷ್ಟ್ರಗಳು ಕೊರೊನಾ ವೈರಸ್ ನಿಯಂತ್ರಣದ ಸಲುವಾಗಿ ಕೊರೊನಾ ಲಸಿಕಾ ತಯಾರಕಾ ಸಂಸ್ಥೆಗಳ ಹಿಂದೆ ದುಂಬಾಲು ಬಿದ್ದಿವೆ. ಅಲ್ಲದೇ, ಶ್ರೀಮಂತ್ರ ರಾಷ್ಟ್ರಗಳು ಕೋಟ್ಯಾಂತರ ಕೊರೊನಾ ಲಸಿಕೆಗಳನ್ನು ಖರೀದಿಸುತ್ತಿವೆ. ಈ ಹಿನ್ನೆಲೆ ಕೊರೊನಾ ಲಸಿಕೆ ಬಡ ರಾಷ್ಟ್ರಗಳಿಗೆ ಸರಿಯಾಗಿ ಪೂರೈಕೆಯಾಗುವುದಿಲ್ಲ" ಎಂದಿದ್ದಾರೆ.
"ವಿಶ್ವಸಂಸ್ಥೆಯು, ಕೊವಾಕ್ಸ್ ಯೋಜನೆ ಅಡಿಯಲ್ಲಿ ಹಿಂದುಳಿದ ರಾಷ್ಟರಗಳು ಸೇರಿದಂತೆ ಎಲ್ಲಾ ರಾಷ್ಟ್ರಗಳಿಗೂ ಕೂಡಾ ಸಮಾನವಾಗಿ ಕೊರೊನಾ ಲಸಿಕೆಯನ್ನು ತಲುಪಿಸುವಂತ ಯೋಜನೆಯನ್ನು ಹೊಂದಿದೆ. ಆದರೆ, ಸಮಾನವಾಗಿ ಲಸಿಕೆಗಳನ್ನು ಹಂಚಲು ಕೊವಾಕ್ಸ್ ಯೋಜನೆಗೆ ಲಭ್ಯವಾಗುವಂತೆ ಮಾಡಬೇಕಾದ್ದರಿಂದ ಶ್ರೀಮಂತ ರಾಷ್ಟ್ರಗಳು ದ್ವಿಪಕ್ಷೀಯ ಒಪ್ಪಂದವನ್ನು ನಿಲ್ಲಿಸಬೇಕು" ಎಂದು ಹೇಳಿದ್ದಾರೆ.