ಇಂಡೋನೇಶಿಯಾ, ಜ. 09 (DaijiworldNews/SM): ಸಂಪರ್ಕ ಕಳೆದುಕೊಂಡಿದ್ದ ಟೇಕ್ ಆಫ್ ಆದ ವಿಮಾನ ಸಮುದ್ರದಲ್ಲಿ ಪತನಗೊಂಡ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಇಂಡೋನೇಶಿಯಾದ ಸ್ಥಳೀಯ ವಾಹಿನಿ ವರದಿ ಮಾಡಿದೆ.
ದೇಶೀಯ ವಿಮಾನ ಬೋಯಿಂಗ್ 737-500 ಜಕಾರ್ತಾದಿಂದ ಮಧ್ಯಾಹ್ನ 1:56 ಕ್ಕೆ ಟೇಕ್ ಆಫ್ ಆಗಿತ್ತು. ಸರಿಸುಮಾರು ಒಂದು ಗಂಟೆಯ ಪ್ರಯಾಣ ಮುಗಿಸಿದ ಬಳಿಕ ವಿಮಾನ ಸಂಪರ್ಕ ಕಳೆದುಕೊಂಡಿದೆ. ಮಧ್ಯಾಹ್ನ 2:40 ಕ್ಕೆ ವಿಮಾನ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿದೆ. ವಿಮಾನ ಸುಮಾರು 10000 ಅಡಿ ಮೇಲೆ ಹಾರುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ರಡಾರ್ನೊಂದಿಗೆ ಸಂಪರ್ಕ ಕಡಿದುಕೊಂಡಿದೆ ಎಂದು ತಿಳಿದು ಬಂದಿದೆ.
ವಿಮಾನವು ಜಕಾರ್ತದಿಂದ ಪಶ್ಚಿಮ ಕಲಿಮಾಂಟನ್ನಲ್ಲಿ ಲ್ಯಾಂಡ್ ಆಗಬೇಕಿತ್ತು. ಆರು ಮಕ್ಕಳು ಸೇರಿದಂತೆ ೫೯ ಪ್ರಯಾಣಿಕರನ್ನು ಹೊಂದಿದ್ದ ವಿಮಾನ ಪತನಗೊಂಡಿರುವ ಬಗ್ಗೆ ಇದೀಗ ಮಾಹಿತಿ ಲಭಿಸಿದೆ.