ಇಸ್ಲಾಮಾಬಾದ್, ಜ.10 (DaijiworldNews/PY): "ಬಾಲಾಕೋಟ್ನ ಉಗ್ರ ಶಿಬಿರದ ಮೇಲೆ 2019 ರ ಫೆಬ್ರವರಿ 26 ರಂದು ಭಾರತ ನಡೆಸಿದ್ದ ವೈಮಾನಿಕ ದಾಳಿಯಲ್ಲಿ 300 ಉಗ್ರರು ಸಾವನ್ನಪ್ಪಿದ್ದರು" ಎಂದು ಪಾಕ್ನ ಮಾಜಿ ರಾಜತಾಂತ್ರಿಕ ಅಧಿಕಾರಿಯೋರ್ವರು ಒಪ್ಪಿಕೊಂಡಿದ್ದಾರೆ.
ಪಾಕ್ನ ಮಾಧ್ಯವೊಂದಕ್ಕೆ ಸಂದರ್ಶನ ನೀಡಿರುವ ಮಾಜಿ ರಾಜತಾಂತ್ರಿಕ ಅಧಿಕಾರಿ ಆಘಾ ಹಿಲಾಲಿ ಅವರು, "ಅಂತರಾಷ್ಟ್ರೀಯ ಗಡಿಯನ್ನು ದಾಟಿ ಭಾರತದ ಯುದ್ಧ ರೀತಿಯಾದ ಕೃತ್ಯವೊಂದನ್ನು ಎಸಗಿತ್ತು. ಈ ಕೃತ್ಯದಲ್ಲಿ ಕನಿಷ್ಠ 300 ಮಂದಿ ಸಾವನ್ನಪ್ಪಿದ್ದರು. ಆದರೆ, ಪಾಕಿಸ್ತಾನವು ಈ ಕೃತ್ಯಕ್ಕೆ ದಿಟ್ಟ ಉತ್ತರ ನೀಡಲು ವಿಫಲವಾಯಿತು" ಎಂದು ಹೇಳಿದ್ದಾರೆ.
ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ನಲ್ಲಿದ್ದ ಉಗ್ರರ ನೆಲೆಗಳ ಮೇಲೆ ಫೆ.26ರಂದು ಬಾಂಬ್ ದಾಳಿ ನಡೆಸಿದ್ದು, ಉಗ್ರ ಶಿಬಿರಗಳನ್ನು ನಾಶಪಡಿಸಿದ್ದವು.
ಫೆ.26ರಂದು ಭಾರತೀಯ ವಾಯುಪಡೆ ನಿರ್ನಾಮ ಮಾಡಿದ್ದ ಬಾಲಾಕೋರ್ಟ್ನ ಜೈಷ್-ಎ-ಮೊಹಮದ್-ಉಗ್ರ ಶಿಬಿರದಲ್ಲಿ ಭಯೋತ್ಪಾದಕರಿಗೆ ಉನ್ನತ ಹಂತದ ತರಬೇತಿ ನೀಡಲಾಗುತ್ತಿತ್ತು ಎಂದು ವರದಿಯಾಗಿತ್ತು.