ನವದೆಹಲಿ, ಜ.11 (DaijiworldNews/HR): ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ಟರ್ ಖಾತೆಗಳನ್ನು ಶಾಶ್ವತವಾಗಿ ಅಮಾನತು ಆದೇಶದ ಹಿಂದೆ ಟ್ವಿಟ್ಟರ್ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವ ವಕೀಲೆ ಭಾರತ ಮೂಲದ ವಿಜಯಾ ಗದ್ದೆ ಅವರು ಪ್ರಮುಖ ಪಾತ್ರ ವಹಿಸಿದ್ದಾರೆಂದು ತಿಳಿದು ಬಂದಿದೆ.
ಕ್ಯಾಪಿಟಲ್ ಹಿಲ್ಸ್ ಗಲಭೆ ಬಳಿಕ ಟ್ರಂಪ್ ಟ್ವಿಟ್ಟರ್ ಖಾತೆಯ ಪೋಸ್ಟ್ಗಳು ಗಲಭೆಕೋರರಿಗೆ ಉತ್ತೇಜನ ಮತ್ತು ಬೆಂಬಲ ನೀಡಿವೆ ಎಂದು ಪರಿಗಣಿಸಿದ ಟೆಕ್ ಸಂಸ್ಥೆ ಅವರ ಟ್ವಿಟ್ಟರ್ ಹ್ಯಾಂಡಲ್ ಅನ್ನು ಶುಕ್ರವಾರ ನಿಷೇಧ ಮಾಡಿತ್ತು.
ಇನ್ನಷ್ಟು ಹಿಂಸಾಚಾರದ ಅಪಾಯದಿಂದಾಗಿ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ. ನಾವು ನಮ್ಮ ನೀತಿ ಜಾರಿ ವಿಶ್ಲೇಷಣೆಯನ್ನು ಕೂಡ ಪ್ರಕಟಿಸಿದ್ದೇವೆ- ನೀವು ನಮ್ಮ ನಿರ್ಧಾರದ ಬಗ್ಗೆ ಇಲ್ಲಿ ಇನ್ನಷ್ಟು ಓದಬಹುದು. ಎಂದು ಕಂಪನಿಯ ಕಾನೂನು, ನೀತಿ ಮತ್ತು ನಂಬಿಕೆ-ಸುರಕ್ಷತೆ ವಿಷಯಗಳ ವಿಭಾಗದ ಮುಖ್ಯಸ್ಥೆ ವಿಜಯ ಗದ್ದೆ ಟ್ವಿಟರ್ನಲ್ಲಿ ಹೇಳಿದ್ದಾರೆ.