ವಾಷಿಂಗ್ಟನ್, ಜ.13 (DaijiworldNews/PY): ಅಮೇರಿಕಾ ಅಧ್ಯಕ್ಷ ಸ್ಥಾನದಿಂದ ಡೊನಾಲ್ಡ್ ಟ್ರಂಪ್ ಅವರು ತೆಗೆದುಹಾಕಲು ಸಂವಿಧಾನದ 25ನೇ ತಿದ್ದುಪಡಿ ಪ್ರಕ್ರಿಯೆಯನ್ನು ಆರಂಭ ಮಾಡಲು ನಾನು ಬೆಂಬಲ ನೀಡುವುದಿಲ್ಲ ಎಂದು ಅಮೇರಿಕಾದ ಉಪಾಧ್ಯಕ್ಷ ಮೈಕ್ ಪೆನ್ಸ್ ಸದನದ ಮುಖಂಡರಿಗೆ ಹೇಳಿದ್ದಾರೆ.
ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿಗೆ ಪತ್ರ ಬರೆದಿರುವ ಮೈಕ್ ಪೆನ್ಸ್, ಅಧ್ಯಕ್ಷರ ಅವಧಿಗೆ ಕೇವಲ ಎಂಟು ದಿನಗಳು ಮಾತ್ರವೇ ಬಾಕಿ ಉಳಿದಿರುವಾಗ, ನೀವು ಸೇರಿದಂತೆ ಡೆಮೋಕ್ರಾಟಿಕ್ ಸದಸ್ಯರು, ಕ್ಯಾಬಿನೆಟ್ 25ನೇ ತಿದ್ದುಪಡಿಯನ್ನು ಹೇರಬೇಕು ಎಂದು ಒತ್ತಾಯ ಮಾಡುತ್ತಿದ್ದೀರಿ. ತಮ್ಮ ಕರ್ತವ್ಯಗಳನ್ನು ಡೊನಾಲ್ಡ್ ಟ್ರಂಪ್ ಅವರು ಪೂರೈಸಿಲ್ಲ ಎಂಬ ಕಾರಣದಿಂದ ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ, ಉಳಿದ ಅವಧಿಗೆ ತಾತ್ಕಾಲಿಕ ಅಧ್ಯಕ್ಷರನ್ನಾಗಿ ಪೆನ್ಸ್ ಅವರನ್ನು ಮುಂದುವರೆಸುವ ಪ್ರಕ್ರಿಯೆಯನ್ನು ತಿಳಿಸಿದ್ದಾರೆ.
"ಈ ರೀತಿಯಾದ ಕ್ರಮವು ನಮ್ಮ ರಾಷ್ಟ್ರದ ಹಿತದೃಷ್ಟಿಯಿಂದ ಅಥವಾ ಸಂವಿಧಾನಕ್ಕೆ ಅನುಗುಣವಾಗಿದೆ ಎನ್ನುವುದನ್ನು ನಾನು ನಂಬಲಾರೆ" ಎಂದಿದ್ದಾರೆ.
"ಆದರೆ, ಮೈಕ್ ಪೆನ್ಸ್ ಅವರ ತಿರಸ್ಕಾರದ ನಂತರವೂ ಕೂಡಾ ಅಮೇರಿಕಾದ ಸಂಸತ್ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಉಚ್ಛಾಟನೆಗೆ 25ನೇ ತಿದ್ದುಪಡಿಯನ್ನು ಮಂಡನೆ ಮಾಡಲಾಗಿದೆ" ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.