ವಾಷಿಂಗ್ಟನ್, ಜ.13 (DaijiworldNews/PY): ಜ.6ರಂದು ಅಮೇರಿಕಾ ಕ್ಯಾಪಿಟಲ್ಗೆ (ಸಂಸತ್) ನುಗ್ಗಿ ದಾಂಧಲೆ ನಡೆಸಿದವರ ವಿರುದ್ದ ಎಫ್ಬಿಐ 160 ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಷಿಂಗ್ಟನ್ನ ಎಫ್ಬಿಐ ಅಧಿಕಾರಿ ಸ್ಟೀವನ್ ಎಂ ಡಿ ಆಂಟುವೊನೊ, "ಅಮೇರಿಕಾ ಅಟಾರ್ನಿ ಕಚೇರಿ ಅಧಿಕಾರಿಗಳೊಂದಿಗೆ ಸಂಸತ್ತಿನ ಮೇಲಿನ ದಾಳಿಯಲ್ಲಿ ಪಾಲ್ಗೊಂಡವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲಾಗಿದೆ "ಎಂದಿದ್ದಾರೆ.
"ನಾವು ದಾಳಿ ನಡೆಸಿದವರ ವಿರುದ್ದ 6 ದಿನಗಳಲ್ಲಿ 160 ಪ್ರಕರಣಗಳನ್ನು ದಾಖಲಿಸಿದ್ದೇವೆ. ಇದು ಆರಂಭವಷ್ಟೇ" ಎಂದು ತಿಳಿಸಿದ್ದಾರೆ.