ಸ್ಯಾನ್ ಡಿಯಾಗೊ, ಜ. 14 (DaijiworldNews/MB) : ಲವು ವಾರಗಳ ಹಿಂದಷ್ಟೇ ಅಮೇರಿಕಾದ ವಲಸೆ ಮತ್ತು ಸೀಮಾಸುಂಕ ಜಾರಿ ಏಜೆನ್ಸಿಯ (ಇಮಿಗ್ರೇಷನ್ ಅಂಡ ಕಸ್ಟಮ್ಸ್ ಎನ್ಫೋರ್ಸ್ಮೆಂಟ್–ಐಸಿಇ) ಪ್ರಭಾರಿ ನಿರ್ದೇಶಕ ಸ್ಥಾನ ವಹಿಸಿದ್ದ ಜೊನಾಥನ್ ಫಹೆ ಅವರು ಬುಧವಾರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತನ್ನ ಈ ದಿಢೀರ್ ನಿರ್ಧಾರಕ್ಕೆ ಯಾವುದೇ ವಿವರಣೆಯನ್ನು ಅವರು ನೀಡಿಲ್ಲ.
ಜೊನಾಥನ್ ತಮ್ಮ ರಾಜೀನಾಮೆ ವಿಷಯವನ್ನು ಇಮೇಲ್ ಮುಖೇನ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅದೇ ಏಜೆನ್ಸಿಯಲ್ಲಿ ಉಪ ನಿರ್ದೇಶಕರಾಗಿದ್ದ ತಾಯೆ ಜಾನ್ಸರ್ ಅವರು ಏಜೆನ್ಸಿಯ ನಾಲ್ಕನೇ ಪ್ರಭಾರಿ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದಾರೆ.
ಅಮೇರಿಕಾದ ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಭಾಗ ಐಸಿಇ ಏಜೆನ್ಸಿಯಾಗಿದ್ದು, ಇದು ಅಕ್ರಮ ವಲಸಿಗರನ್ನು ಬಂಧಿಸಿ ಗಡಿಪಾರು ಮಾಡುವ ಮತ್ತು ಅಂತರರಾಷ್ಟ್ರೀಯ ಅಪರಾಧ ತನಿಖೆಗಳನ್ನು ನಡೆಸುತ್ತದೆ.