ಲಂಡನ್, ಜ.14 (DaijiworldNews/PY): "ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ-ಪಾಕಿಸ್ತಾನ ರಾಷ್ಟ್ರಗಳು ಶಾಶ್ವತವಾಗಿ ರಾಜೀಯ ತೀರ್ಮಾನವನ್ನು ತೆಗೆದುಕೊಳ್ಳಬೇಕು" ಎಂದು ಬ್ರಿಟನ್ ಸರ್ಕಾರ ತಿಳಿಸಿದೆ.
ಕಾಶ್ಮೀರದ ರಾಜಕೀಯ ಪರಿಸ್ಥತಿ ಬಗ್ಗೆ ಬ್ರಿಟನ್ ಸಂಸತ್ತಿನಲ್ಲಿ ನಡೆದ ಚರ್ಚೆಗೆ ಪ್ರತಿಕ್ರಿಯೆ ನೀಡಿದ ವಿದೇಶಿ, ಕಾಮನ್ವೆಲ್ತ್ ಹಾಗೂ ಅಭಿವೃದ್ಧಿ ಕಚೇರಿ ಸಚಿವ ನಿಗೆಲ್ ಆಡಮ್ಸ್ ಅವರು, "ಕಾಶ್ಮೀರ ಸಮಸ್ಯೆಯ ವಿಚಾರದ ಬಗ್ಗೆ ತಾನು ಮಧ್ಯಸ್ಥಿಕೆ ವಹಿಸಿಕೊಳ್ಳಲು ಸಾಧ್ಯವಿಲ್ಲ" ಎಂದಿದ್ದಾರೆ.
"ಕಾಶ್ಮೀರದ ವಿಚಾರದ ಬಗ್ಗೆ ನಮ್ಮ ಸರ್ಕಾರದ ನಿಲುವಿನಲ್ಲಿ ಯಾವುದೇ ರೀತಿಯಾದ ಬದಲಾವಣೆಗಳಿಲ್ಲ. ಆದರೆ, ಎರಡೂ ರಾಷ್ಟ್ರಗಳೂ ಕೂಡಾ ಕಾಶ್ಮೀರ ಸಮಸ್ಯೆಯ ಬಗ್ಗೆ ಸರಿಯಾದ ತೀರ್ಮಾನ ಮಾಡಬೇಕು" ಎಂದು ಹೇಳಿದ್ದಾರೆ.
"ಈ ವಿಚಾರದ ಬಗ್ಗೆ ಬ್ರಿಟನ್ ಸರ್ಕಾರ ಪರಿಹಾರ ತಿಳಿಸುವುದಾಗಲಿ ಅಥವಾ ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸುವುದು ಉತ್ತಮವಲ್ಲ" ಎಂದಿದ್ದಾರೆ.