ವಾಷಿಂಗ್ಟನ್,ಜ.16 (DaijiworldNews/HR): ನಿರ್ಗಮಿತ ಅಮೇರಿಕಾದ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ತಮ್ಮ ಉತ್ತರಾಧಿಕಾರಿ, ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಶುಭಾಶಯ ಕೋರಿ, ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಪೂರ್ಣ ಪ್ರಮಾಣದ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷದ ಅಕ್ಟೋಬರ್ನಲ್ಲಿ ಅಧ್ಯಕ್ಷೀಯ ಚುನಾವಣೆ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಮೈಕ್ ಪೆನ್ಸ್ ಮತ್ತು ಕಮಲಾ ಅವರು ಪರಸ್ಪರ ಮಾತನಾಡಿಕೊಂಡಿದ್ದು, ನವೆಂಬರ್ 3ರ ಚುನಾವಣೆ ನಂತರ ಮೊದಲ ಬಾರಿಗೆ ದೂರವಾಣಿ ಮೂಲಕ ಪರಸ್ಪರ ಮಾತನಾಡಿದ್ದಾರೆಂದು ತಿಳಿದು ಬಂದಿದೆ.
ಇನ್ನು ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದ್ದು, ಇಲ್ಲಿವರೆಗೂ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಅವರ ನಡುವೆ ಯಾವುದೇ ಮಾತುಕತೆ, ಸಂವಾದ ಮತ್ತು ಭೇಟಿ ನಡೆದಿಲ್ಲ ಎಂದು ವರದಿಯಾಗಿದೆ.