ವಾಷಿಂಗ್ಟನ್,ಜ.17 (DaijiworldNews/HR): ಅಮೇರಿಕಾದ ನೂತನ ಅಧ್ಯಕ್ಷರಾಗಿ ಜನವರಿ 20ರಂದು ಪ್ರಮಾಣ ವಚನ ಸ್ವೀಕರಿಸಲಿರುವ ಜೋ ಬಿಡೆನ್ ಅವರು,ತಮ್ಮ ಹೊಸ ಆಡಳಿತಕ್ಕೆ ಮತ್ತೆ 20 ಮಂದಿ ಭಾರತ ಮೂಲದ ಅಮೇರಿಕನ್ನರನ್ನು ನೇಮಕ ಮಾಡಿಕೊಂಡಿದ್ದಾರೆ.
ನೇಮಕಗೊಂಡವರ ಪೈಕಿ 13 ಮಂದಿ ಮಹಿಳೆಯರಿದ್ದು, 20ರಲ್ಲಿ 17 ಮಂದಿ ಶ್ವೇತಭವನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಭಾರತ–ಅಮೆರಿಕನ್ನರು ಹೊಸ ಆಡಳಿತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಪ್ರಮುಖ ಹುದ್ದೆಗಳನ್ನು ಅಲಂಕರಿಸುವ ಮೂಲಕ ದಾಖಲೆ ಸ್ಥಾಪಿಸಿದ್ದಾರೆ.
ಇನ್ನು ವನೀತಾ ಗುಪ್ತಾ ಅವರನ್ನು ನ್ಯಾಯಾಂಗ ಇಲಾಖೆಯ ಅಸೋಸಿಯೇಟ್ ಅಟಾರ್ನಿ ಜನರಲ್ ಆಗಿ ನೇಮಿಸಲಾಗಿದ್ದು, ಉಜ್ರಾ ಝೇಯಾ ಅವರನ್ನು ವಿದೇಶಾಂಗ ಇಲಾಖೆಯ ನಾಗರಿಕ ಭದ್ರತೆ ಮತ್ತು ಮಾನವ ಹಕ್ಕುಗಳ ವಿಭಾಗಕ್ಕೆ ನೇಮಿಸಲಾಗಿದೆ. ಮಾಲಾ ಅಡಿಗ ಅವರನ್ನು ಅಮೇರಿಕಾದ ಮೊದಲ ಮಹಿಳೆಯಾಗಲಿರುವ ಡಾ. ಜಿಲ್ ಬಿಡೆನ್ ಅವರಿಗೆ ನೀತಿ ನಿರ್ದೇಶಕರನ್ನಾಗಿ ಹಾಗೂ ಗರಿಮಾ ವರ್ಮಾ ಅವರನ್ನು ಡಿಜಿಟಲ್ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.