ಸುಡಾನ್, ಜ.19 (DaijiworldNews/PY): ಎರಡು ದಿನಗಳಿಂದ ಸುಡಾನ್ ದೇಶದ ದಾರ್ಫರ್ ವಲಯದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಸುಮಾರು 80ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ವರ್ಷಗಳಿಂದ ದೇಶದ ಪಶ್ಚಿಮ ಭಾಗದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿಲ್ಲಿಸುವ ನಿಟ್ಟಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಶಾಂತಿ ಒಪ್ಪಂದ ನಡೆದಿತ್ತು.
ಎಲ್ ಗೆನೈನದ ಅರಬ್ ಹಾಗೂ ಅರಬೇತರ ಬುಡಕಟ್ಟು ಮಂದಿಯ ನಡುವೆ ಗಲಭೆ ನಡೆಯುತ್ತಿದೆ.