ವಾಷಿಂಗ್ಟನ್,ಜ.19 (DaijiworldNews/HR): "ನಮ್ಮ ಹೊಸ ಆಡಳಿತದ ಎದುರು ಅನೇಕ ಸವಾಲುಗಳಿವೆ, ಆದರೆ ಅವುಗಳನ್ನು ಎದುರಿಸಿ ಗೆಲ್ಲುವುದು ಅಷ್ಟು ಸುಲಭವಲ್ಲ" ಎಂದು ಅಮೇರಿಕಾದ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಈ ಕುರಿತು ರಾಷ್ಟ್ರೀಯ ಸೇವಾ ದಿವಸ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹೊಸ ಆಡಳಿತ ಆರಂಭವಾದ ಬಳಿಕ ಯಾವ ಯಾವ ಕೆಲಸಗಳಿಗೆ ಆದ್ಯತೆ ನೀಡಬೇಕೆಂದು ಬಿಡೆನ್ ಪಟ್ಟಿ ಮಾಡಿದ್ದು, ಅದರಂತೆ ಕಾರ್ಯನಿರ್ವಹಿಸುತ್ತೇವೆ" ಎಂದರು.
ಇನ್ನು "ಮುಖ್ಯವಾಗಿ ಕೊರೊನಾ ಲಸಿಕೆ ವಿತರಣೆಗೆ ಯೋಜನೆ ರೂಪಿಸುವುದು, ಕೊರೊನಾ ಸೋಂಕಿನಿಂದ ನೊಂದಿರುವ ನೌಕರ ವರ್ಗದವರಿಗೆ ಮತ್ತು ಕುಟುಂಬಗಳಿಗೆ ಪರಿಹಾರ ನೀಡುವುದು, ಮುಂತಾದ ಕೆಲಸಗಳು ಆದ್ಯತೆಯ ಪಟ್ಟಿಯಲ್ಲಿವೆ" ಎಂದು ಹೇಳಿದ್ದಾರೆ.