ವಾಷಿಂಗ್ಟನ್, ಜ.21 (DaijiworldNews/MB) : ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅಮೇರಿಕಾದ 46ನೇ ಅಧ್ಯಕ್ಷ ಜೊ ಬಿಡೆನ್ ಅವರು ಡೊನಾಲ್ಡ್ ಟ್ರಂಪ್ ಸರ್ಕಾರದ ಮುಸ್ಲೀಮರ ಪ್ರಯಾಣ ನಿಷೇಧ ನೀತಿಯ ತೆರವು ಸೇರಿದಂತೆ 17 ಪ್ರಮುಖ ಆದೇಶಗಳಿಗೆ ಬಿಡೆನ್ ಹಸ್ತಾಕ್ಷರ ಹಾಕಿದ್ದಾರೆ.
ಮುಸ್ಲೀಮರು ಬಹುಸಂಖ್ಯಾತರಾಗಿರುವ ದೇಶಗಳ ಪ್ರಯಾಣಿಕರು ಅಮೇರಿಕಾಕ್ಕೆ ಪ್ರಯಾಣ ಮಾಡುವುದಕ್ಕೆ ಈ ಮುಸ್ಲೀಮರ ಪ್ರಯಾಣ ನಿಷೇಧ ನೀತಿಯು ನಿಷೇಧ ಹೇರಿತ್ತು.
ಆದರೆ ಈಗ ಬಿಡೆನ್ ಈ ಮುಸ್ಲೀಮರ ಪ್ರಯಾಣ ನಿಷೇಧ ನೀತಿಯನ್ನು ತೆರವು ಮಾಡಿದ್ದು ಈ ನೀತಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಜನರಿಗೆ ವೀಸಾ ನೀಡುವ ಪ್ರಕ್ರಿಯೆ ಪ್ರಾರಂಭ ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಅಕ್ರಮ ವಲಸಿಗರ ತಡೆಗಾಗಿ ಮೆಕ್ಸಿಕೊ ಗಡಿಯುದ್ದಕ್ಕೂ ನಿರ್ಮಿಸಲು ಯೋಜಿಸಿದ್ದ ಗೋಡೆ ಕಾಮಗಾರಿಗೆ ಬಿಡೆನ್ ತಕ್ಷಣದ ಮುಕ್ತಾಯ ಘೋಷನೆ ಮಾಡಿದ್ದಾರೆ. ಪ್ಯಾರಿಸ್ ಒಪ್ಪಂದಕ್ಕೆ ಮರುಸೇರ್ಪಡೆ ಹಾಗೂ ವಲಸಿಗ ನಿರಾಶ್ರಿತರ ರಕ್ಷಣೆಗೂ ಕ್ರಮ ಕೈಗೊಂಡಿದ್ದಾರೆ.