ವಾಷಿಂಗ್ಟನ್, ಜ.21 (DaijiworldNews/PY): ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನ ಬಿಟ್ಟು ಹೋಗುವ ಮೊದಲು ತಮಗಾಗಿ 'ಉದಾತ್ತ ಪತ್ರ' ಬರೆದಿಟ್ಟು ನಿರ್ಗಮಿಸಿರುವುದಾಗಿ ಅಮೇರಿಕಾದ ನೂತನ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ನಿರ್ಗಮಿತ ಅಧ್ಯಕ್ಷರು ತಮ್ಮ ಉತ್ತರಾಧಿಕಾರಿಗೆ ಓವಲ್ ಕಚೇರಿಯ ರೆಸೊಲ್ಯೂಟ್ ಮೇಜಿನಲ್ಲಿ ಪತ್ರ ಬರೆದಿಟ್ಟು ಹೋಗುವುದು ವಾಡಿಕೆಯಾಗಿದೆ.
ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಡೆನ್, "ಡೊನಾಲ್ಡ್ ಟ್ರಂಪ್ ಅವರು ಉದಾತ್ತ ಪತ್ರ ಬರೆದಿಟ್ಟು ಹೋಗಿದ್ದಾರೆ. ಈ ಪತ್ರ ಖಾಸಗಿಯಾಗಿರುವ ಕಾರಣ ಪತ್ರದಲ್ಲಿರುವ ವಿಚಾರವನ್ನು ಬಹಿರಂಗಪಡಿಸಲು ನಾನು ಬಯಸುವುದಿಲ್ಲ. ನಾನು ಅವರೊಂದಿಗೆ ಮಾತನಾಡುವವರೆಗೆ ಈ ವಿಚಾರದ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ" ಎಂದಿದ್ದಾರೆ.
"ಭಿನ್ನಾಭಿಪ್ರಾಯಗಳ ಮಧ್ಯೆಯೂ ಕೂಡಾ ಡೊನಾಲ್ಡ್ ಟ್ರಂಪ್ ಅವರು ಮಾತನಾಡಲು ಉತ್ಸುಕರಾಗಿದ್ದಾರೆ" ಎಂದು ಹೇಳಿದ್ದಾರೆ.