ಬಾಗ್ದಾದ್, ಜ.21 (DaijiworldNews/HR): ಬಾಂಬ್ ಸ್ಫೋಟಗೊಂಡು ಆರು ಸಾವನ್ನಪ್ಪಿ, ಮೂವರು ಪೊಲೀಸ್ ಅಧಿಕಾರಿಗಳು ಸೇರಿದಂತೆ 21 ಮಂದಿ ಗಾಯಗೊಂಡಿರುವ ಘಟನೆ ಇರಾಕ್ ರಾಜಧಾನಿ ಬಾಗ್ದಾದ್ನ ವಾಣಿಜ್ಯ ಕೇಂದ್ರವೊಂದರ ಬಳಿ ಎರಡು ಕಡೆ ನಡೆದಿದೆ.
ಈ ಕುರಿತು ಸುದ್ದಿವಾಹಿನಿಯೊಂದು ಮಾಡಿರುವ ವರದಿಯ ಪ್ರಕಾರ, "ಇದು ಆತ್ಮಾಹುತಿ ದಳದವರು ಮಾಡಿರುವ ಸ್ಫೋಟ" ಎಂದು ತಿಳಿಸಿದೆ.
ಇನ್ನು ಘಟನೆಯಲ್ಲಿ ಗಾಯಗೊಂಡಿರುವ ಅನೇಕ ಮಂದಿಯ ಸ್ಥಿತಿ ಗಂಭೀರವಾಗಿದ್ದು, ಘಟನೆ ಸಂಭವಿಸಿದ ಸ್ಥಳದಲ್ಲಿ ಆಸ್ತಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.