ಲಂಡನ್,ಜ.23 (DaijiworldNews/HR): "ಮೊದಲಿಗೆ ಇಂಗ್ಲೆಂಡ್ನಲ್ಲಿ ಪತ್ತೆಯಾದ ಕೊರೊನಾ ವೈರಸ್ನ ಹೊಸ ರೂಪಾಂತರ ಮತ್ತಷ್ಟು ಮಾರಣಾಂತಿಕವಾಗಿ ಅತೀ ಹೆಚ್ಚು ಸಾವುಗಳು ಸಂಭವಿಸಬಹುದು" ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಹೊಸ ರೂಪಾಂತರ ಕೊರೊನಾ ವೈರಸ್ ಹೆಚ್ಚು ಅಪಾಯಕಾರಿಯಾಗಿದ್ದು, 30 ರಿಂದ 70 ಪ್ರತಶತದಷ್ಟು ಪರಿಣಾಮ ಬೀರುತ್ತದೆ. ಲಂಡಮ್ನಲ್ಲಿ ಕಂಡು ಬಂದಿರುವ ರೂಪಾಂತರಿ ಕೊರೊನಾ ವೈರಸ್ ವೇಗವಾಗಿ ಹರಡುವ ಜೊತೆಗೆ ಸಾವಿನ ಪ್ರಮಾಣವನ್ನು ಹೆಚ್ಚಿಸುತ್ತಿದೆ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ" ಎಂದರು.
ಇನ್ನು "ವಿಜ್ಞಾನಿಗಳು ಹೇಳಿರುವ ಆಧಾರದ ಮೇಲೆ ಜಾನ್ಸನ್ ಹೊಸ ರೂಪಾಂತರ ವೈರಸ್ ಮತ್ತಷ್ಟು ಮಾರಕವೆಂದು ತಿಳಿಸಿದ್ದು,ಮಾತ್ರವಲ್ಲದೆ ಪೈಜರ್, ಬಯೋಟೆಕ್, ಆಸ್ಟ್ರಜೆನಾಕ, ಆಕ್ಸ್ ಫರ್ಡ್ ಲಸಿಕೆಗಳನ್ನು ಬ್ರಿಟನ್ ನಲ್ಲೂ ನೀಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.