ವಿಶ್ವಸಂಸ್ಥೆ, ಜ.23 (DaijiworldNews/HR): ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತವು ನಿರಂತರ ಬೆಂಬಲ ಕೊಡುತ್ತಿರುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಧನ್ಯವಾದ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಡಬ್ಲ್ಯುಎಚ್ಒ ಮುಖ್ಯಸ್ಥ ಟೆಡ್ರೋಸ್ ಅಡಾನೊಮ್ ಗೆಬ್ರೆಯೆಸಸ್, "ಕೊರೊನಾ ವಿರುದ್ಧದ ಜಾಗತಿಕ ಹೋರಾಟಕ್ಕೆ ನಿರಂತರ ಬೆಂಬಲ ನೀಡಿದ್ದಕ್ಕಾಗಿ ಭಾರತ ಮತ್ತು ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನಾವು ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಮಾತ್ರ ಈ ವೈರಸ್ನಿಂದ ಜೀವ ಮತ್ತು ಜೀವನಗಳನ್ನು ಉಳಿಸಬಹುದು" ಎಂದು ಹೇಳಿದ್ದಾರೆ.
ಇನ್ನು ಭಾರತವು ದಕ್ಷಿಣ ಏಷ್ಯಾದ ನೆರೆಹೊರೆಯ ದೇಶಗಳೂ ಸೇರಿದಂತೆ ಬ್ರೆಜಿಲ್ ಮತ್ತು ಮೊರಾಕೊದಂತಹ ದೇಶಗಳಿಗೆ ಕೊರೊನಾ ಲಸಿಕೆಗಳನ್ನು ಕಳುಹಿಸುತ್ತಿದೆ ಎಂದು ತಿಳಿದು ಬಂದಿದೆ.