ಬ್ರೆಝಿಲ್, ಜ.25 (DaijiworldNews/MB) : ಬ್ರೆಝಿಲ್ನ ಪ್ರಸಿದ್ಧ ಫುಟ್ಬಾಲ್ ಕ್ಲಬ್ಗಳಲ್ಲೊಂದಾದ ಪಲ್ಮಸ್ ಫುಟ್ಬಾಲ್ ಕ್ಲಬ್ನ ಅಧ್ಯಕ್ಷ ಮತ್ತು ನಾಲ್ವರು ಆಟಗಾರರು ರವಿವಾರ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ದುರಂತದಲ್ಲಿ ಕ್ಲಬ್ನ ಅಧ್ಯಕ್ಷ ಲುಕಾಸ್ ಮೀರಾ, ಆಟಗಾರರಾದ ಲುಕಾಸ್ ಪ್ರಕ್ಷಿಡೆಸ್, ಗುಲ್ಮರ್ ನೋಯಿ, ರೆನಿಲ್ ಮತ್ತು ಮಾರ್ಕಸ್ ಮೊಲಿನರಿ ಮೃತಪಟ್ಟಿದ್ದಾರೆ. ಪೈಲಟ್ ವ್ಯಾಗ್ನರ್ ಕೂಡಾ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಆಟಗಾರರು ಬ್ರೆಝಿಲಿಯನ್ ಕಪ್ ಪಂದ್ಯಾವಳಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಪಲ್ಮಸ್ ನಗರದ ಬಳಿಯ ಟೊಕಾನಿಟಿನೀಸ್ ಏವಿಯೇಶನ್ ಅಸೋಶಿಯೇಶನ್ ವಿಮಾನ ನಿಲ್ದಾಣದ ರನ್ವೇ ಕೊನೆಯಲ್ಲಿ ವಿಮಾನ ಟೇಕಾಫ್ ಆಗುತ್ತಿರುವಾಗಲೇ ಅಪಘಾತ ಉಂಟಾಗಿದೆ. ಹಾಗೆಯೇ ಈ ದುರಂತದಲ್ಲಿ ಯಾರೂ ಕೂಡಾ ಜೀವಂತ ಉಳಿದಿಲ್ಲ ಎಂದು ಕ್ಲಬ್ ಮಾಹಿತಿ ನೀಡಿದೆ.
ಇದೇ ರೀತಿಯ ಘಟನೆ 2016ರಲ್ಲಿ ನಡೆದಿದೆ. ಕೊಲಂಬಿಯಾದಲ್ಲಿ ನಡೆಯುವ ಕೊಪಾ ದೂಡಾ ಮೆರಿಕಾನಾ ಫೈನಲ್ನಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಂದರ್ಭ ಮೆಡೆಲಿನ್ ಪಟ್ಟಣದ ಹೊರಗೆ ಬೆಟ್ಟಕ್ಕೆ ಢಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಈ ವೇಳೆ ಚೆಪೆಕೊಯೆನ್ಸ್ ತಂಡದ ಸದಸ್ಯರು ಸಾವನ್ನಪ್ಪಿದ್ದರು.