ವಾಷಿಂಗ್ಟನ್, ಜ.25 (DaijiworldNews/HR): ಭಾರತೀಯ ಮೂಲದ ದೇವ್ ಜಗದೇಶನ್ ಅವರನ್ನು ಅಂತರರಾಷ್ಟ್ರೀಯ ಅಭಿವೃದ್ಧಿ ಹಣಕಾಸು ನಿಗಮದ (ಡಿಎಫ್ಸಿ) ಉಸ್ತುವಾರಿ ಮುಖ್ಯಸ್ಥರಾಗಿ ಅಧ್ಯಕ್ಷ ಜೋ ಬಿಡೆನ್ ಅವರು ನೇಮಕ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಬಿಡೆನ್, "ಸಾರ್ವಜನಿಕ ಸೇವೆಯಲ್ಲಿ ದೇವ್ ಜಗದೇಶನ್ ಅಮೇರಿಕಾದ ಜನರ ಸೇವೆಗೆ ಬದ್ಧರಾಗಿದ್ದು, ಅವರಿಗೆ ರಾಜಕೀಯ ಪಕ್ಷ, ತಮ್ಮದೇ ಅಜೆಂಡಾ ಇಲ್ಲ ಅವರ ಅನುಭವ ಮತ್ತು ಬದ್ಧತೆಯನ್ನು ಸರ್ಕಾರ ಬಳಸಿಕೊಳ್ಳಲಿದೆ" ಎಂದರು.
ಇನ್ನು ದೇವ್ ಜಗದೇಶನ್ ಅವರು ಕ್ಯಾಥೊಲಿಕ್ ಯೂನಿವರ್ಸಿಟಿಯಲ್ಲಿ ಬಿ.ಎ ಮತ್ತು ಕೊಲಂಬಸ್ ಸ್ಕೂಲ್ ಆಫ್ ಲಾದಲ್ಲಿ ಜೆ.ಡಿ ಪದವಿ ಪೂರೈಸಿದ್ದು, ಡಿಎಫ್ಸಿಯ ಡೆಪ್ಯೂಟಟಿ ಜನರಲ್ ಕೌನ್ಸಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.