ಸಿಂಗಾಪುರ್,ಜ.26 (DaijiworldNews/HR): ಚೀನಾ ಮತ್ತು ಸಿಂಗಾಪುರದ ಅನಿವಾಸಿ ಭಾರತೀಯರು ಮಂಗಳವಾರದಂದು 72 ನೇ ಗಣರಾಜ್ಯೋತ್ಸವವನ್ನು ಸರ್ಕಾರದ ಕೊರೊನಾ ನಿರ್ಬಂಧಗಳೊಂದಿಗೆ ಆಚರಿಸಿದ್ದಾರೆ.
ಕೊರೊನಾ ನಿಯಮಗಳನ್ನು ಮನಸಿನಟ್ಟಿಟ್ಟುಕೊಂಡು ಬೀಜಿಂಗ್, ಚೀನಾದ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಿಷನ್ ಅಧಿಕಾರಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಮಾತ್ರ ಗಣರಾಜ್ಯೋತ್ಸವಕ್ಕೆ ಆಹ್ವಾನಿಸಲಾಗಿತ್ತು. ರಾಯಭಾರಿ ವಿಕ್ರಮ್ ಮಿಸ್ರಿ ಅವರು ಭಾರತೀಯ ರಾಯಭಾರ ಕಚೇರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ಮಾಡಿದ್ದಾರೆ.
ಇನ್ನು ಚೈತಿ ಆರ್ಟ್ಸ್ ಫೌಂಡೇಶನ್ ನಿರ್ಮಿಸಿದ ವಂದೇ ಮಾತರಂನ ವಿಶೇಷ ವಾದ್ಯ ಸಂಗೀತದಿಂದ ಸಂಯೋಜಿಸಲಾದ ಗೀತೆಯನ್ನು ಬಿಡುಗಡೆಗೊಳಿಸಿದ ವಿಕ್ರಮ್ ಮಿಸ್ರಿ ಬಳಿಕ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರ ಭಾಷಣವನ್ನು ಓದಿದ್ದಾರೆ.