ವಾಷಿಂಗ್ಟನ್, ಜ.27 (DaijiworldNews/MB) : 20 ಕೋಟಿ ಹೆಚ್ಚುವರಿ ಕೊರೊನಾ ಲಸಿಕೆ ಖರೀದಿಸಲು ನೂತನ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ತೀರ್ಮಾನಿಸಿದ್ದಾರೆ.
ಈ ವರ್ಷದೊಳಗೆ 60 ಕೋಟಿ ಮಂದಿಗೆ ಕೊರೊನಾ ಲಸಿಕೆ ನೀಡುವ ಗುರಿ ತಲುಪುವ ನಿಟ್ಟಿನಲ್ಲಿ ಅಮೇರಿಕಾದ ಎಫ್ಡಿಎ ಅನುಮೋದಿಸಿರುವ ಪಿಫಿಝರ್ ಮತ್ತು ಮೊಡೆರ್ನಾ ಲಸಿಕೆಗಳ 20 ಕೋಟಿ ಹೆಚ್ಚುವರಿ ಡೋಸ್ ಖರೀದಿಗೆ ನಿರ್ಧರಿಸಲಾಗಿದ್ದು, ಈ ಮುಖೇನ 30 ಕೋಟಿ ಮಂದಿಗೆ ಲಸಿಕಾ ಸುರಕ್ಷೆ ಒದಗಿಸಲು ಮುಂದಾಗಿದೆ. ಅಮೇರಿಕಾದಲ್ಲಿ ಖರೀದಿಸಿರುವ ಲಸಿಕಾ ಡೋಸ್ಗಳ ಸಂಖ್ಯೆ 40 ಕೋಟಿಯಿಂದ 60 ಕೋಟಿಗೆ ಏರಲಿದೆ ಎಂದು ಶ್ವೇತಭವನ ಪ್ರಕಟಿಸಿದೆ.
''ಪ್ರತಿ ವಾರ ರಾಜ್ಯಗಳಿಗೆ ನೀಡಲಾಗುವ ಲಸಿಕಾ ಡೋಸ್ ಅಧಿಕಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಪ್ರಸ್ತುತ ಇರುವ 86 ಲಕ್ಷದಿಂದ 1 ಕೋಟಿಗೆ ಏರಿಸಲಾಗುತ್ತಿದೆ. ಈ ಮೂಲಕ ನಿರೀಕ್ಷೆಗೂ ಮೊದಲು 14 ಲಕ್ಷ ಮಂದಿ ಲಸಿಕೆ ಪಡೆಯಲಿದ್ದಾರೆ. ಬೇಸಿಗೆಯ ಕೊನೆಗೆ 30 ಕೋಟಿ ಅಮೇರಿಕನ್ನರು ಲಸಿಕೆ ಪಡೆಯಲಿದ್ದಾರೆ'' ಎಂದು ಪ್ರಕಟಣೆ ತಿಳಿಸಿದೆ.