ವಾಷಿಂಗ್ಟನ್, ಜ.28 (DaijiworldNews/PY): ಅಮೇರಿಕಾದಲ್ಲಿ ಎಚ್ 4 ವೀಸಾ ಹೊಂದಿರುವವರಿಗೆ ನೌಕರಿ ದೃಢೀಕರಣವನ್ನು ನೀಡುವ ನಿಯಮವನ್ನು ರದ್ದುಪಡಿಸಿದ್ದ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಯಮವನ್ನು ಅಧ್ಯಕ್ಷ ಜೋ ಬಿಡೆನ್ ಅವರು ತೆಗೆದುಹಾಕಿದ್ದಾರೆ.
ಸಾಂದರ್ಭಿಕ ಚಿತ್ರ
ಹಿಂದಿನ ಟ್ರಂಪ್ ಆಡಳಿತವು, ಎಚ್ 1ಬಿ ವೀಸಾ ಹೊಂದಿರುವಂತ ನೌಕರರ ಸಂಗಾತಿಗೆ ನೀಡುವ ಎಚ್ 4 ವೀಸಾವನ್ನು ರದ್ದು ಮಾಡಿ ನೂತನ ನಿಯಮವನ್ನು ರೂಪಿಸಿತ್ತು. ಆದರೆ, ಜೋ ಬಿಡೆನ್ ಅವರು ಅಧಿಕಾರಕ್ಕೆ ಬಂದ ವಾರದೊಳಗೆ ಹಳೆ ವೀಸಾ ನಿಯಮವನ್ನು ರದ್ದುಪಡಿಸಿದ್ದಾರೆ.
ಅಮೇರಿಕಾ ಪೌರತ್ವ ಹಾಗೂ ವಲಸೆ ನೀತಿಯ ಸೇವೆಯು ಎಚ್ 4 ವೀಸಾವನ್ನು ಎಚ್ 1ಬಿ ವೀಸಾ ಹೊಂದಿರುವಂತ ನೌಕರರ ಸಂಗಾತಿ ಅಥವಾ 21 ವರ್ಷದ ಕೆಳಗಿನ ಮಕ್ಕಳಿಗೆ ನೀಡಲಾಗುತ್ತದೆ. ಅಮೇರಿಕಾದಲ್ಲಿ ಈ ವೀಸಾ ಪಡೆದಿರುವ ಪೈಕಿ ಭಾರತೀಯ ಐಟಿ ವೃತ್ತಿಪರರ ಸಂಖ್ಯೆ ಅಧಿಕವಾಗಿದೆ.