ವಾಷಿಂಗ್ಟನ್, ಜ.29 (DaijiworldNews/PY): ಜನರಿಗೆ ಕೈಗೆಟಕುವ ರೀತಿಯಲ್ಲಿ ಆರೋಗ್ಯ ಸೇವೆ ಹಾಗೂ ವೈದ್ಯಕೀಯ ಸೌಲಭ್ಯ ಹಾಗೂ ಮಹಿಳೆಯರ ಆರೋಗ್ಯ ರಕ್ಷಣೆಗೆ ನೆರವಾಗುವ ಎರಡು ಆರೋಗ್ಯ ಸುರಕ್ಷಾ ಯೋಜನೆಗಳ ಕಾರ್ಯಾದೇಶಕ್ಕೆ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಸಹಿ ಹಾಕಿದ್ದಾರೆ.
ಮಾಜಿ ಅಧ್ಯಕ್ಷ ಟ್ರಂಪ್ ಅವರ ಆಡಳಿತದ ಸಂದರ್ಭ ರದ್ದಾಗಿದ್ದ ಮೊದಲ ಕಾರ್ಯಾದೇಶವನ್ನು ಪುನರ್ ಅನುಷ್ಠಾನಗೊಳಿಸುವುದಾಗಿದ್ದು, ಎರಡನೇ ಕಾರ್ಯಾದೇಶವು, ದೇಶ ಹಾಗೂ ವಿದೇಶದಲ್ಲಿ ಮಹಿಳೆಯರ ಆರೋಗ್ಯ ರಕ್ಷಣೆಗೆ ಸಂಬಂಧಪಟ್ಟದ್ದಾಗಿದೆ.
ಜೋ ಬಿಡೆನ್ ಅವರು ಅಮೇರಿಕಾ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಒಂದು ವಾರದೊಳಗೆ ರದ್ದಾಗಿದ್ದ ಹಲವು ಕಾಯ್ದೆಗಳಿಗೆ ಮರುಜೀವ ನೀಡಿದ್ದು, ಇದೀಗ ಆರೋಗ್ಯ ರಕ್ಷಣೆಯತ್ತ ತಮ್ಮ ಗಮನಹರಿಸಿದ್ದಾರೆ.
"ಟ್ರಂಪ್ ಆಡಳಿತದ ಸಂದರ್ಭ ವೈದ್ಯಕೀಯ ಸೌಲಭ್ಯ ದುಬಾರಿಯಾಗಿತ್ತು. ಆರೋಗ್ಯ ಸೇವಗೆಳು ಜನರ ಕೈಗೆಟಕುತ್ತಿರಲಿಲ್ಲ. ಹೊಸ ಕಾರ್ಯಾದೇಶಗಳು ಸಾಮಾನ್ಯ ಜನರಿಗೂ ಕೈಗೆಟಕುವ ರೀತಿಯಲ್ಲಿದೆ" ಎಂದು ತಿಳಿಸಿದ್ದಾರೆ.