ವುಹಾನ್, ಜ.30 (DaijiworldNews/PY): ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳನ್ನೊಳಗೊಂಡ ತಂಡವು ಕೊರೊನಾ ವೈರಸ್ನ ಮೂಲದ ಪತ್ತೆಗೆ ಚೀನಾದ ವುಹಾನ್ ನಗರದ ಎರಡನೇ ಆಸ್ಪತ್ರೆಗೆ ಭೇಟಿ ನೀಡಿದೆ.
"2020ರ ಪ್ರಾರಂಭದಲ್ಲಿ ನಗರದ ಜಿನಿಯಾಂಟನ್ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ರೋಗಿಯೊಬ್ಬರಲ್ಲಿ ವೈರಸ್ ಪತ್ತೆಯಾಗಿದ್ದು, ಇದು ತನಿಖೆಯ ಮುಖ್ಯ ಭಾಗವಾಗಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಶುಕ್ರವಾರದಂದು ಮೊದಲ ಬಾರಿಗೆ ಡಬ್ಲ್ಯುಎಚ್ಒ ತಂಡ ಚೀನಾದ ವಿಜ್ಞಾನಿಗಳ ಜೊತೆ ಮುಖಾಮುಖಿಯಾಗಿ ಸಭೆ ನಡೆಸಿದೆ. ನಂತರ ಹುಬೈ ಇಂಟಿಗ್ರೇಟೆಡ್ ಚೈನೀಸ್ ಮತ್ತು ವೆಸ್ಟರ್ನ್ ಮೆಡಿಸಿನ್ ಆಸ್ಪತ್ರೆಗೆ ವೈರಾಲಜಿ, ಪ್ರಾಣಿಗಳ ಆರೋಗ್ಯ, ಆಹಾರ ಸುರಕ್ಷತೆ ಹಾಗೂ ಸಾಂಕ್ರಾಮಿಕ ರೋಗದಲ್ಲಿ ಪರಿಣತಿ ಹೊಂದಿರುವ ತಜ್ಞರು ಭೇಟಿ ನೀಡಿದ್ದರು.
"ತನ್ನ ವಿಜ್ಞಾನಿಗಳ ತಂಡದ ತನಿಖೆಯ ಮುಂದುವರಿದ ಭಾಗವಾಗಿ ವುಹಾನ್ ಇನ್ಸ್ಟಿಟ್ಯೂಟ್.ಆಫ್ ವೈರಾಲಜಿ, ವುಹಾನ್ ಸೆಂಟರ್ ಫಾರ್ ಡಿಸೀಸ್ ಪ್ರಯೋಗಾಲಯ ಹಾಗೂ ಸೀಫುಡ್ ಮಾರ್ಕೆಟ್ಗಳಿಗೆ ಭೇಟಿ ನೀಡಲು ತೀರ್ಮಾನ ಮಾಡಿದೆ" ಎಂದು ಡಬ್ಲ್ಯುಎಚ್ಒ ತಿಳಿಸಿದೆ.