ಯಾಂಗೂನ್, ಫೆ.01 (DaijiworldNews/HR): ಸೇನೆಯು ಮ್ಯಾನ್ಮಾರ್ನಲ್ಲಿ ದಂಗೆಯೆದ್ದಿದ್ದು, ಯಾಂಗೂನ್ ನಗರದ ಸರ್ಕಾರಿ ಕಟ್ಟಡದ ಮೇಲೆ ನಿಯಂತ್ರಣ ಸಾಧಿಸಿ ಒಂದು ವರ್ಷದವರೆಗೆ ತುರ್ತು ಪರಿಸ್ಥಿತಿ ಘೋಷಿಸಿದೆ.
ಸಾಂಧರ್ಭಿಕ ಚಿತ್ರ
ಒಂದು ವರ್ಷದವರೆಗೆ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಸರ್ಕಾರಿ ದೂರದರ್ಶನದಲ್ಲಿ ಘೋಷಣೆ ಮಾಡಲಾಗಿದ್ದು, ಅಧಿಕಾರವನ್ನು ಸಶಸ್ತ್ರ ಪಡೆಗಳ ಕಮಾಂಡರ್ ಇನ್ ಚೀಫ್ ಮೀನ್ ಆಂಗ್ ಲಾಯ್ ಅವರಿಗೆ ವಹಿಸಲಾಗಿದೆ ಎಂದೂ ಹೇಳಲಾಗಿದೆ.
ಇನ್ನು ಸೋಮವಾರದಂದು ಯಾಂಗೂನ್ ನಗರದ ಸರ್ಕಾರಿ ಕಟ್ಟಡದ ಮೇಲೆ ಸಶಸ್ತ್ರ ಪಡೆಗಳು ನಿಯಂತ್ರಣ ಸಾಧಿಸಿದ್ದು, ದೇಶದ ಪರಮೋಚ್ಚ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಸೇನೆಯು ಬಂಧಿಸಿದ ನಂತರ ಅಲ್ಲಿ ದಂಗೆಯ ಲಕ್ಷಣಗಳು ಗೋಚರಿಸಿದ್ದವು ಎನ್ನಲಾಗಿದೆ.