ವಾಷಿಂಗ್ಟನ್, ಫೆ.02 (DaijiworldNews/HR): ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆ ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್ನಲ್ಲಿ ನಡೆದಿದ್ದು, ಇದನ್ನು ಭಾರತೀಯ-ಅಮೇರಿಕಾದ ಕಾಂಗ್ರೆಸ್ ಸದಸ್ಯ ರೋ ಖನ್ನಾ ಖಂಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಇದೊಂದು ನಾಚಿಕೆಗೇಡಿನ ಕೃತ್ಯ. ನಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಸಹಿಷ್ಣುತೆ ಮತ್ತು ತಾಳ್ಮೆಯಿಂದ ನಿರ್ವಹಿಸಬೇಕಾದರೆ, ಸಾರ್ವಜನಿಕ ವಿಧ್ವಂಸಕ ಕೃತ್ಯಗಳನ್ನು ಮಾಡುವ ಬದಲು ಪರಸ್ಪರ ಮಾತು ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ನಾನು ಎಲ್ಲರನ್ನೂ ಕೋರುತ್ತೇನೆ" ಎಂದರು.್
ಇನ್ನು "ಈ ಪ್ರತಿಮೆಯು ಪಾದದ ಬಳಿ ಮುರಿದುಹೋಗಿದ್ದು, ಅದರ ತಲೆಯ ಮೇಲ್ಭಾಗವು ಮುರಿದುಹೋಗಿದೆ ಎಂದು ಮಂಗಳವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಉದ್ಯಾನವನದ ಕೆಲಸಗಾರರು ಮಾಹಿತಿ ನೀಡಿದ್ದಾರೆ" ಎಂದು ಡೇವಿಸ್ ಪೊಲೀಸ್ ಇಲಾಖೆಯ ಡೆಪ್ಯೂಟಿ ಚೀಫ್ ಪಾಲ್ ಡೊರೊ ಶೊವ್ ತಿಳಿಸಿದ್ದಾರೆ.