ವಿಶ್ವಸಂಸ್ಥೆ,ಫೆ.02 (DaijiworldNews/HR): ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನಲ್ಲಿ ಈಗ ಲಕ್ಷಾಂತರ ಜನರು ಆಹಾರ ಹಾಗೂ ಅಗತ್ಯ ವಸ್ತುಗಳು ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದು, ಕ್ಯಾಮರೂನ್ ಮೂಲಕ ಆಹಾರ, ಅಗತ್ಯ ವಸ್ತುಗಳು ಪೂರೈಕೆಯಾಗುತ್ತಿತ್ತು. ಆದರೆ ಈಗ ಈ ಮಾರ್ಗವನ್ನು ಬಂದ್ ಮಾಡಿರುವ ಕಾರಣ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಈ ಕುರಿತು ಮಾತನಾಡಿರುವ ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ದುಜಾರಿಕ್, "ದೇಶದ 20.3 ಲಕ್ಷ ಜನರು ಆಹಾರ ಸಿಗದೇ ತೊಂದರೆಗೆ ಸಿಲುಕಿದ್ದು, 2 ಲಕ್ಷ ಜನರು ತಮ್ಮ ಮನೆಗಳನ್ನು ತೊರೆದಿದ್ದು, ಸುರಕ್ಷಿತ ಸ್ಥಳಗಳನ್ನು ಹುಡುಕಿ ಬೇರೆ ದೇಶಗಳಿಗೂ ವಲಸೆ ಹೋಗಿದ್ದಾರೆ" ಎಂದರು.
ಇನ್ನು "92,000 ನಿರಾಶ್ರಿತರು ನೆರೆಯ ಕಾಂಗೊ ದೇಶ ತಲುಪಿದ್ದು,13,200ಕ್ಕೂ ಅಧಿಕ ನಿರಾಶ್ರಿತರು ಕ್ಯಾಮರೂನ್, ಚಾಡ್ ಮತ್ತು ಕಾಂಗೊ ದಾಟಿದ್ದು, ಸುರಕ್ಷಿತ ಸ್ಥಳ ಅರಸಿಕೊಂಡು ಮುನ್ನಡೆದಿದ್ದಾರೆ" ಎಂದ ತಿಳಿಸಿದರು.